September 28, 2026
Monday, September 28, 2026
spot_img

CINE | ಮದುವೆಯಲ್ಲಿ ರಶ್ಮಿಕಾಗಾಗಿ ಕೊರಿಯನ್‌ ಹಾಡಿಗೆ ಹೆಜ್ಜೆ ಹಾಕಿದ ವಿಜಯ್‌ ದೇವರಕೊಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಕೊರಿಯನ್‌ ಸೀರೀಸ್‌ ಹಾಗೂ ಅನಿಮೆಗಳ ಫ್ಯಾನ್‌ ಅನ್ನೋದು ಈಗಾಗಲೇ ಎಲ್ಲ ಫ್ಯಾನ್ಸ್‌ಗೂ ಗೊತ್ತಿದೆ. ರಶ್ಮಿಕಾಗೆ ಸರ್ಪ್ರೈಸ್‌ ನೀಡಬೇಕು ಎನ್ನುವ ಕಾರಣಕ್ಕೆ ವಿಜಯ್‌ ದೇವರಕೊಂಡ ಸಂಗೀತ್‌ನಲ್ಲಿ ಕೊರಿಯನ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನಿನ್ನೆಯಷ್ಟೇ ರಶ್ಮಿಕಾ ಹಾಗೂ ವಿಜಯ್‌ ಅದ್ಧೂರಿ ವಿವಾಹ ನೆರವೇರಿದೆ. ವಿವಾಹಕ್ಕೂ ಮುನ್ನ ಅರಿಶಿಣ ಶಾಸ್ತ್ರ, ಮೆಹೆಂದಿ ಹಾಗೂ ಸಂಗೀತ್‌ ನಡೆಸಲಾಗಿತ್ತು. ಸಂಗೀತ್‌ನಲ್ಲಿ ರಶ್ಮಿಕಾ ವಿಜಯ್‌ಗಾಗಿ ಪುಷ್ಪ ೨ ಸಿನಿಮಾದ ಸಾಮಿ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಅದೇ ರೀತಿ ರಶ್ಮಿಕಾಗೆ ಸರ್ಪ್ರೈಸ್‌ ಕೊಡೋದಕ್ಕೆ ವಿಜಯ್‌ ಒಪ್ಪ ಗಂಗ್ನಮ್‌ ಸ್ಟೈಲ್‌ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ.

ರಶ್ಮಿಕಾ ಕೆ-ಡ್ರಾಮಾ, ಕೊರಿಯನ್ ಪಾಪ್ ಸಂಸ್ಕೃತಿ ಇಷ್ಟಪಡುವವರು. ವಿವಾಹ ಪೂರ್ವ ಸಮಾರಂಭದಲ್ಲಿ ಕೇಕ್ ಕೂಡ ಕೆ-ಡ್ರಾಮಾ ಥೀಮ್ ಆಗಿತ್ತು. ವಿಜಯ್ ಅವರ ಸರ್ಪ್ರೈಸ್ ಡ್ಯಾನ್ಸ್ ಕಾರ್ಯಕ್ರಮದ ಹೈಲೈಟ್ ಆಗಿತ್ತು. 

Must Read