ಕುಖ್ಯಾತ ರೌಡಿ ಮುರುಗನ್‌ ಎನ್‌ಕೌಂಟರ್‌ ಗೆ ಬಲಿ: ಆತನ ಮೇಲಿತ್ತು 60 ಪ್ರಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿ ಎಂಬಲ್ಲಿ ನಿರವಿ ಮುರುಗನ್​ ಎಂಬ ರೌಡಿಯನ್ನು ಪೊಲೀಸರು ಎನ್​ಕೌಂಟರ್​ ನಡೆಸಿ ಹತ್ಯೆ ಮಾಡಿದ್ದಾರೆ. ನಿರವಿ ಮುರುಗನ್​ ಕುಖ್ಯಾತ ರೌಡಿಯಾಗಿದ್ದು ಕೊಲೆ, ಅಪಹರಣ ಸೇರಿದಂತೆ ಸುಮಾರು 60 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ತಿರುನಲ್ವೇಲಿ, ಟುಟಿಕೋರಿನ್ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಪೊಲೀಸ್​ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಇತ್ತೀಚೆಗೆ ದಿಂಡಿಗಲ್​​ ಒಡ್ಡಾಣಛತ್ರಂ ಎಂಬಲ್ಲಿ ವೈದ್ಯರೊಬ್ಬರ ಮನೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಮುರಗುನ್ ಶಾಮೀಲಾಗಿದ್ದ. 2004ರಲ್ಲಿ ತಮಿಳುನಾಡಿನ ಮಾಜಿ ಕಾನೂನು ಸಚಿವ ಅಲಾದಿ ಅರುಣಾರ ಹತ್ಯೆ ಪ್ರಕರಣದಲ್ಲೂ ಮುರುಗನ್‌ ಪಾತ್ರವಿತ್ತು. ಬರೀ ತಮಿಳುನಾಡಿನಷ್ಟೇ ಅಲ್ಲದೆ, ಕರ್ನಾಟಕ ಸೇರಿ ಇನ್ನೂ ಹಲವು ರಾಜ್ಯಗಳಲ್ಲಿ ಕ್ರೈಂಗಳಲ್ಲಿ ಪಾಲ್ಗೊಂಡಿದ್ದಾನೆ.
ಈತ ತಿರುನಲ್ವೇಲಿಯ ಕಲಕ್ಕಡ್​ ನ ನಗರಸಭೆಯೊಳಗೆ ಅಡಗಿರುವ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ಪೊಲೀಸರು ಹೋದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಗುಂಡು ಹಾರಿಸಿ ಕೊಂಡಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ಎನ್​ಕೌಂಟರ್ ನಲ್ಲಿ ಹತ್ಯೆಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!