ಏಷ್ಯಾಕಪ್​​ ಗೆ ಕೊನೆಗೂ ಮುಹೂರ್ತ ಫಿಕ್ಸ್​​: ಆಗಸ್ಟ್​​​ 27ರಿಂದ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

2022ರ ಏಷ್ಯಾಕಪ್​​ ಗೆ ಕೊನೆಗೂ ಮುಹೂರ್ತ ಫಿಕ್ಸ್​​ ಆಗಿದ್ದು,ಆಗಸ್ಟ್​​​ 27ರಿಂದ ಶ್ರೀಲಂಕಾದಲ್ಲಿ ಟೂರ್ನಿ ಆರಂಭವಾಗಲಿದೆ.
ಇನ್ನು ಏಷ್ಯಾಕಪ್ ಟೂರ್ನಿಗಾಗಿ ನಡೆಯುವ ಕ್ವಾಲಿಫೈಯರ್​ ಪಂದ್ಯಗಳು ಆಗಸ್ಟ್​​​ 20ರಿಂದ ಆರಂಭಗೊಳ್ಳಲಿದ್ದು, ಟೂರ್ನಿ ಆಗಸ್ಟ್​​ 27ರಿಂದ ಆರಂಭಗೊಂಡು ಸೆಪ್ಟಂಬರ್​​ 11ರಂದು ಮುಕ್ತಾಯಗೊಳ್ಳಲಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಏಷ್ಯಾಕಪ್ ಟೂರ್ನಿ ಕೋವಿಡ್​ನಿಂದಾಗಿ 2020ರ ರದ್ದುಗೊಳಿಸಿ ಏಷ್ಯನ್​ ಕ್ರಿಕೆಟ್ ಕೌನ್ಸಿಲ್​​ ಪ್ರಕಟಣೆ ಹೊರಡಿಸಿತ್ತು. ಆದರೆ, 2021ರಲ್ಲಿ ಟೂರ್ನಿ ನಡೆಸಲು ಎಸಿಸಿ ಕ್ರಮ ಕೈಗೊಂಡಿತ್ತು. ಈ ವೇಳೆ ಕೋವಿಡ್ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದಂತೆ ಟೂರ್ನಿ ಮುಂದೂಡಿಕೆ ಮಾಡಲಾಗಿತ್ತು.
ಇದೀಗ ಕೊನೆಗೂ ಆರಂಭಕ್ಕೆ ಡೇಟ್ ಫಿಕ್ಸ್ ಆಗಿದ್ದು, ಸಿದ್ದತೆಗಳು ನಡೆಯುತ್ತಿದೆ.
2022ರ ಏಷ್ಯಾಕಪ್​​ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಸೇರಿದಂತೆ ಒಂದು ಕ್ವಾಲಿಫೈಯರ್ ತಂಡ ಭಾಗಿಯಾಗಲಿದೆ. ಕ್ವಾಲಿಫೈಯರ್​​ನಲ್ಲಿ ಯುಎಇ ಮತ್ತು ಕುವೈತ್​ ಸೆಣಸಾಟ ನಡೆಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here