ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಹಲವು ಅಡೆತಡೆಗಳನ್ನು ಮೆಟ್ಟಿ ನಿಂತು ಭಾರತದಾದ್ಯಂತ ಪ್ರದರ್ಶನಗೊಂಡು ಅದ್ಭುತ ಯಶಸ್ಸನ್ನು ಗಳಿಸುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಈಗ ವಿದೇಶದಲ್ಲಿಯೂ ತೆರೆ ಕಾಣುತ್ತಿದೆ.
ಇಂದು ಯುರೋಪಿಯನ್ ದೇಶ ಫಿನ್ಲೆಂಡ್ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೆಲ್ಸಿಂಕಿಯಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
Today History is being created. #TheKashmirFiles is now screening in #Finland.
For the records, the delay has been due to opposition from JKLF whose EU headquarters tried their best to stop the film. But can TRUTH be ever stopped? pic.twitter.com/Y1DyCCDusm
— Vivek Ranjan Agnihotri (@vivekagnihotri) March 26, 2022
ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇಂದು ಇತಿಹಾಸ ಸೃಷ್ಟಿಯಾಗುತ್ತಿದೆ, ದ ಕಾಶ್ಮೀರ್ ಫೈಲ್ಸ್ ಈಗ ಫಿನ್ಲ್ಯಾಂಡ್ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಜಮ್ಮು ಕಾಶ್ಮೀರ್ ಲಿಬರೇಷನ್ ಫ್ರಂಟ್ ನ ವಿರೋಧದಿಂದಾಗಿ ವಿಳಂಬವಾಗಿದೆ, ಅದರ ಯುರೋಪಿಯನ್ ಯೂನಿಯನ್ ಪ್ರಧಾನ ಕಛೇರಿಯು ಚಲನಚಿತ್ರವನ್ನು ನಿಲ್ಲಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಆದರೆ ಸತ್ಯವನ್ನು ಎಂದಾದರೂ ನಿಲ್ಲಿಸಬಹುದೇ? ಎಂದು ಅಗ್ನಿಹೋತ್ರಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನ ಮತ್ತು ನಿರ್ಮಾಣದ ದಿ ಕಾಶ್ಮೀರ್ ಫೈಲ್ಸ್ 1990ರಲ್ಲಿ ಕಾಶ್ಮೀರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಅಲ್ಲಿನ ಕಾಶ್ಮೀರಿ ಪಂಡಿತರನ್ನು ಅಮಾನುಷವಾಗಿ ಕೊಂದು, ಅಲ್ಲಿಂದ ಓಡಿಸಿದ, ಅತ್ಯಾಚಾರ ಘಟನೆಗಳನ್ನಾಧರಿಸಿದ ಚಲನಚಿತ್ರವು ಎಲ್ಲೆಡೆ ಅದ್ಭುತ ಯಶಸ್ಸನ್ನು ಪಡೆದಿದೆ.