ಸೌದಿ ಸಚಿವ ಬೇಡರ್ ಬಿನ್ ಫರ್ಹಾನ್ ಅಲ್ಸೌದ್ ಜೊತೆ  ಅಕ್ಷಯ್, ಖಾನ್ ತ್ರಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಸೈಫ್ ಅಲಿ ಖಾನ್ ಜೊತೆ ಭೇಟಿಯಾದ ಫೋಟೋಗಳನ್ನು  ಸೌದಿ ಅರೇಬಿಯಾದ ಸಂಸ್ಕೃತಿ ಸಚಿವ ಬೇಡರ್ ಬಿನ್ ಫರ್ಹಾನ್ ಅಲ್ಸೌದ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಭಾರತೀಯ ಚಲನಚಿತ್ರ ಸಮುದಾಯದ ಸದಸ್ಯರನ್ನು ಭೇಟಿಯಾಗಿದ್ದು ಸಂತೋಷ ನೀಡಿದೆ, ಪಾಲುದಾರಿಕೆ ಅವಕಾಶ ಜೊತೆಯಾಗಿ ಅನ್ವೇಷಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಶಾರುಖ್ ಖಾನ್ ನಟನೆಯ ಪಠಾಣ್ ಜನವರಿ 25, 2023 ರಂದು ಬಿಡುಗಡೆಯಾಗಲಿದೆ. ಸಲ್ಮಾನ್ ಖಾನ್ ಟೈಗರ್ 3 ತೆರೆಗೆ ಬರಲು ಸಜ್ಜಾಗುತ್ತಿದ್ದು,  ಅಕ್ಷಯ್ ಕುಮಾರ್ ಅವರ ರಾಮ್ ಸೇತು, ರಕ್ಷಾ ಬಂಧನ ಮತ್ತು ಸೆಲ್ಫಿ ಇತ್ಯಾದಿಗಳೂ ತೆರೆಗೆ ಬರಲು ಸಿದ್ಧತೆಯಲ್ಲಿವೆ. ಶೀಘ್ರವೇ ಸೈಫ್ ಅಲಿ ಖಾನ್ ನಟನೆಯ ವಿಕ್ರಮ್ ವೇದಾ ಮತ್ತು ಆದಿಪುರುಷ ಚಿತ್ರ ತೆರೆಕಾಣಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!