ಯಾವುದೇ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಲು ಪ್ರೀತಿ, ವಿಶ್ವಾಸ ಮತ್ತು ಭಾವನಾತ್ಮಕ ಬೆಂಬಲ ಅತ್ಯಂತ ಮುಖ್ಯ. ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದು, ಪ್ರೀತಿಯನ್ನು ವ್ಯಕ್ತಪಡಿಸದಿರುವುದು ಅಥವಾ ಕಾಳಜಿ ತೋರಿಸದಿರುವುದು ಸಂಬಂಧದಲ್ಲಿ ಬಿರುಕು ತರಬಹುದು. ಇಂತಹ ಸಂದರ್ಭಗಳಲ್ಲಿ, ನಂಟು ನಿಧಾನವಾಗಿ ದುರ್ಬಲಗೊಳ್ಳುತ್ತಾ ಬಿರುಕು ಮೂಡಿಸುತ್ತದೆ. ಸಂಬಂಧದಲ್ಲಿ ಕೇವಲ ಮಾತುಗಳಿಗಷ್ಟೇ ಅಲ್ಲ, ಕಾಳಜಿಯ ನಡೆ-ನುಡಿಗಳೂ ಅಗತ್ಯ.
- ಪ್ರೀತಿಯ ಸನ್ನೆಗಳಿಗೆ ಪ್ರತಿಕ್ರಿಯೆ ನೀಡಿ: ನಿಮ್ಮ ಸಂಗಾತಿಯ ಅಭಿನಂದನೆ, ಪ್ರೀತಿಯ ಸಂದೇಶ ಅಥವಾ ಸಣ್ಣ ಕಾಳಜಿಗಳನ್ನು ನಿರ್ಲಕ್ಷಿಸಬೇಡಿ. ಪ್ರತಿಕ್ರಿಯೆ ನೀಡುವುದರಿಂದ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.
- ವಿವಾದಗಳನ್ನು ಬಗೆಹರಿಸಿ: ಸಣ್ಣ ವಿವಾದಗಳನ್ನೂ ಬಗೆಹರಿಸದೇ ಬಿಟ್ಟರೆ ಅವು ದೊಡ್ಡ ಅಂತರ ಉಂಟುಮಾಡಬಹುದು. ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಿ.
- ಪರಸ್ಪರ ಗೌರವ: ಸಂಬಂಧವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಪ್ರತಿಯೊಬ್ಬರೂ ಗೌರವ ಮತ್ತು ಕಾಳಜಿಗೆ ಅರ್ಹರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ.
- ಸಂವಹನದ ಶಕ್ತಿ: ಯಾವುದೇ ಸಂಬಂಧದ ಆಧಾರ ಸಂವಹನ. ಭಾವನೆಗಳನ್ನು ಹಂಚಿಕೊಳ್ಳಿ, ಪರಸ್ಪರ ನೋವು ನಲಿವುಗಳನ್ನು ಆಲಿಸಿ. ಮಾತನಾಡುವುದೇ ಭಾವನಾತ್ಮಕ ಅಂತರವನ್ನು ತುಂಬುವ ಮಾರ್ಗ.

