ಉತ್ತರ ಪ್ರದೇಶ ಸಿಎಂ ಕಚೇರಿ ಟ್ವಿಟರ್‌ ಖಾತೆಯನ್ನೇ ಹ್ಯಾಕ್ ಮಾಡಿದ ಕಿಡಿಗೇಡಿ ಹ್ಯಾಕರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಖಾತೆಯನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡಿದ್ದಾರೆ.
ಈ ಖಾತೆಯಲ್ಲಿ ಹ್ಯಾಕರ್‌ ಗಳು ನೂರಕ್ಕೂ ಹೆಚ್ಚಿನ ಟ್ವಿಟ್‌ ಗಳನ್ನು ಗಳನ್ನು ಮಾಡಿದ್ದಾರೆ, ಪ್ರೊಫೈಲ್ ಫೋಟೋವನ್ನು ಸಹ ಬದಲಿಸಿದ್ದು, ವ್ಯಂಗ್ಯಚಿತ್ರಕಾರರೊಬ್ಬರ ಚಿತ್ರವನ್ನು ಪ್ರೊಫೈಲ್‌ಗೆ ಬಳಸಿದ್ದಾರೆ.
ಟ್ಯುಟೋರಿಯಲ್: How to turn on your BAYC / MAYC ಎಂಬ ಟ್ವೀಟ್‌ ಅನ್ನು ಪಿನ್‌ ಮಾಡಿ ನೇರವಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಹ್ಯಾಕ್ ಆದ ಖಾತೆಯ ಸ್ಕ್ರೀನ್ ಶಾಟ್ ಗಳನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
UP CMO @CMOfficeUP ಟ್ವಿಟರ್ ಖಾತೆಯು ಪ್ರಸ್ತುತ ನಾಲ್ಕು ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಸರ್ಕಾರಿ ಇಲಾಖೆಯ ಟ್ವಿಟರ್ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಬಿಟ್‌ಕಾಯಿನ್ ಅನ್ನು ಪ್ರಚಾರ ಮಾಡುವ 3 ಪೋಸ್ಟ್‌ಗಳನ್ನು ಮಾಡಲಾಗಿದೆ. ಬಿಟ್‌ಕಾಯಿನ್ ಅನ್ನು ಭಾರತ ಸರ್ಕಾರ ಕಾನೂನುಬದ್ಧಗೊಳಿಸಿದೆ ಮತ್ತು 500 ಬಿಟ್‌ಕಾಯಿನ್‌ಗಳನ್ನು ಖರೀದಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂಬ ಲಿಂಕ್‌ಗಳನ್ನು ಪೋಸ್ಟ್ ಮಾಡಲಾಗಿತ್ತು. ಅಧಿಕಾರಿಗಳು ಪ್ರಸ್ತುತ ಹ್ಯಾಕ್‌ ಆಗಿದ್ದ ಉತ್ತರ ಪ್ರದೇಶ ಸಿಎಂ ಟ್ವಿಟರ್ ಖಾತೆಯನ್ನು ಸರಿಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!