ಸಿದ್ದರಾಮಯ್ಯನವರ ಟೀಕೆಗೆ ಮೌನವೇ ಉತ್ತರ: ಸಚಿವ ಕೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿದ್ದರಾಮಯ್ಯನವರು ತುಂಬಾ ದೊಡ್ಡವರು, ಹೀಗಾಗಿ ದೊಡ್ಡವರ ಸಣ್ಣ ಮಾತಿಗೆ ಉತ್ತರಿಸುವ ಅವಶ್ಯಕತೆ ಇಲ್ಲ, ಮೌನವೇ ಉತ್ತರ ಎಂದು ಸಿದ್ದರಾಮಯ್ಯನವರ ಟೀಕೆಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ತೀಕ್ಷ್ಣವಾಗಿ ಉತ್ತರಿಸಿದರು

ಅವರು ಸೋಮವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ವಿರೋಧ ಪಕ್ಷದ ಸ್ಥಾನದಲ್ಲಿದ್ದು ಸಿದ್ದರಾಮಯ್ಯನವರು ಟೀಕೆ ಮಾಡುತ್ತಾರೆ. ಆದರೆ ಅವರು ಸಣ್ಣ ಮಾತುಗಳಲ್ಲಿ ಹೇಳಿರುವುದಕ್ಕೆಲ್ಲಾ ಉತ್ತರಿಸುವ ಅಗತ್ಯತೆ ಇಲ್ಲ.

ಪ್ರಾಮಾಣಿಕ, ಸಮರ್ಥ ಗೃಹ ಮಂತ್ರಿಯಾಗಿರುವ ಆರಗ ಜ್ಞಾನೇಂದ್ರ ಅವರು ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಹಿಜಾಬ್ ವಿಚಾರದಲ್ಲಿ ಹೈ ಕೋರ್ಟ್ ಆದೇಶ ನೀಡಿದೆ, ತೀರ್ಪಿನಲ್ಲಿ ಕಾಂಗ್ರೆಸ್ ನವರಿಗೆ ಒಮ್ಮತ ಇಲ್ಲದಿದ್ದರೇ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಅದನ್ನು ಹೊರತು ಪಡಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಬೇಡಿ ಎಂಬುವುದು ತಪ್ಪು ಎಂದು ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!