ಹೊಸದಿಗಂತ ವರದಿ, ಕಲಬುರಗಿ
ಏಪ್ರಿಲ್ 16ರಂದು ಶ್ರೀ ಹನುಮ ಜಯಂತಿ ಪ್ರಯುಕ್ತ 14 ಅಡಿ ಎತ್ತರದ ಹನುಮಾನ್ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ರಾಷ್ಟೀಯ ಭಜರಂಗದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ವಿಶ್ವಕರ್ಮ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಅಂದು ಬೆಳಿಗ್ಗೆ 10:30 ಗಂಟೆಗೆ ರಾಮತೀರ್ಥ ಮಂದಿರದಿಂದ ಸಾಗುವ ಹನುಮಾನ ಮೂರ್ತಿಯ ಶೋಭಯಾತ್ರೆಯೂ ನಗರದ ಜಗತ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ. ಇದಕ್ಕೂ ಮುನ್ನ ರಾಮತೀಥ೯ ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ 101 ಯುವಕರಿಂದ ಹಿಂದೂ ರಾಷ್ಟ್ರದ ಸಂಕಲ್ಪ ಹೊತ್ತು,ಹೋಮ ಹವನ ಪೂಜೆ ನಡೆಯಲಿದೆ ಎಂದು ಹೇಳಿದರು.
ರಾಷ್ಟ್ರೀಯ ಭಜರಂಗದಳ ಅಡಿಯಲ್ಲಿ ಶ್ರೀ ಕೇಸರಿ ನಂದನ ಯುವ ಬ್ರಿಗೇಡ್,ನ ಸಮಿತಿಯನ್ನು ರಚಿಸಲಾಗಿದ್ದು,ಶೋಭಾಯಾತ್ರೆಗೆ ಸಕಲ ಸಿದ್ದತೆಗಳನ್ನು ಸಮಿತಿಯೂ ಮಾಡಿಕೊಂಡಿದೆ. ಶೋಭಾಯಾತ್ರೆಗೆ ಜಿಲ್ಲೆಯ ಹಿಂದೂ ಪರ ಸಂಘಟನೆಯಗಳು,ಮುಖಂಡರು ಭಾಗವಹಿಸಲಿದ್ದು,ವಿಶೇಷವಾಗಿ ಜಿಲ್ಲೆಯ 11 ಜನ ಮಠಾಧೀಶರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಶ್ರೀ ಕೇಸರಿ ಗುಡ್ಡದ ಸ್ವಾಮೀಜಿ ಸಾಂಭಾ ಮಹಾರಾಜರು ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಕಲಬುರಗಿ ನಗರದಲ್ಲಿ ಯುವಕರ ತಂಡವೊಂದು 14 ಅಡಿ ಎತ್ತರದ ಹನುಮಾನ್ ಮೂತಿ೯ಯ ಭವ್ಯ ಶೋಭಾಯಾತ್ರೆ ಹಮ್ಮಿಕೊಂಡಿದ್ದು,ಸಕಲ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಅಧ್ಯಕ್ಷ ಆನಂದ ಚವ್ಹಾಣ, ಶಶಿಕಾಂತ ಆರ್. ದೀಕ್ಷಿತ, ಶ್ವೇತಾ ಸಿಂಗ್, ಚಂದ್ರಕಾಂತ ಕಾಳಗಿ ಮುಂತಾದವರು ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ