ಹೊಸದಿಗಂತ ಡಿಜಟಲ್ ಡೆಸ್ಕ್
ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಸಖತ್ ಸದ್ದು ಮಾಡಿರುವ ಕೆಜಿಎಫ್ ಚಾಪ್ಟರ್ 2 ನಾಳೆ ತೆರೆಗೆ ಅಪ್ಪಳಿಸಲಿದ್ದು, ಇದರ ಮುನ್ನ ಕೆಜಿಎಫ್ 2 ಚಿತ್ರದ ‘ಸುಲ್ತಾನ್’ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಬೆಳಗ್ಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಸಾಂಗ್ ರಿಲೀಸ್ ಆಗಿದೆ.
ರಣ…ರಣ..ಧೀರ ರುದಿರೆಬ್ಬಿ ನಿಂತ ರಣಧೀರ.. ಎಂದು ಈ ಲಿರಿಕಲ್ ಸಾಂಗ್ ಶುರುವಾಗುತ್ತದೆ. ಇದೀಗ ‘ಸುಲ್ತಾನ್’ ಸಾಂಗ್ ಇಡೀ ಚಿತ್ರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ‘ತೂಫಾನ್’ ಸಾಂಗ್ ರಿಲೀಸ್ ಆಗಿತ್ತು.
ಯಶ್ ರಾಖಿ ಭಾಯ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನವಿದೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಳೆ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತಿದೆ.