ಡ್ಯಾನಿಶ್‌ ಓಪನ್‌ ಈಜು ಸ್ಪರ್ಧೆಯಲ್ಲಿ ಚಿನ್ನಗೆದ್ದು ದೇಶಕ್ಕೆ ಹೆಮ್ಮೆತಂದ ನಟ ಮಾಧವನ್‌ ಪುತ್ರ ವೇದಾಂತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚಿತ್ರ ನಟ ಮಾಧವನ್‌ ಪುತ್ರ ವೇದಾಂತ್​ ಅವರು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್​​ ಈಜುಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಪುರುಷರ 800 ಮೀಟರ್ಸ್‌ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ 16 ವರ್ಷದ ವೇದಾಂತ್‌ ಮಾಧವನ್ ಕೇವಲ 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಪದಕಕ್ಕೆ ಮುತ್ತಿಕ್ಕಿದರು.
ಡ್ಯಾನಿಶ್‌ ಓಪನ್ ನಲ್ಲಿ ನಿನ್ನೆ ನಡೆದಿದ್ದ 1500 ಮೀಟರ್​ ಫ್ರೀಸ್ಟೈಲ್​ನಲ್ಲಿ ವೇದಾಂತ್‌ ಬೆಳ್ಳಿ ಗೆದ್ದಿದ್ದರು. ಇದೀಗ ಚಿನ್ನ ಗೆಲ್ಲುವ ಮೂಲಕ ಎರಡನೇ ಪದ ಗೆದ್ದಿರುವ ಸಾಧನೆ ಮಾಡಿದ್ದಾರೆ. 10 ಮಂದಿ ಸ್ಪರ್ಧಿಸಿದ್ದ ಈ ವಿಭಾಗದ ಫೈನಲ್​ ಸುತ್ತಿನಲ್ಲಿ ವೇದಾಂತ್​ 15 ನಿಮಿಷ 57.86 ಸೆಕೆಂಡ್​ಗಳಲ್ಲಿ ಗುರಿ ತಲುಪಿ 2ನೇ ಬೆಳ್ಳಿಗೆದ್ದಿದ್ದರು. ಭಾರತದವರೇ ಆದ ಸಾಜನ್‌ ಪ್ರಕಾಶ್‌ ಚಿನ್ನ ಗೆದ್ದಿದ್ದರು.

 

ವೇದಾಂತ್‌ ಚಿನ್ನದ ಪದಕ ಸ್ವೀಕರಿಸುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿರುವ ಮಾಧವನ್‌ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ದೇವರ ಕೃಪೆಯಿಂದ ಸಜನ್ ಪ್ರಕಾಶ್ ಮತ್ತು ವೇದಾಂತ್​ ಮಾಧವನ್​ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್​​ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಂದುಕೊಟ್ಟಿದ್ದಾರೆ. ಕೋಚ್​ ಪ್ರದೀಪ್​ ಅವರಿಗೆ, ಸ್ವಿಮ್ಮಿಂಗ್ ಫೆಡರೇಷನ್​ ಆಫ್ ಇಂಡಿಯಾ ಮತ್ತು ಎಎನ್​ಎಸ್​ಎಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!