ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದಿನೇ ದಿನೇ ನಡೆಯುತ್ತಿರುವ ಕೋಮು ಗಲಾಭೆಗಳನ್ನು ಮಟ್ಟುಗೋಲು ಹಾಕೋದಕ್ಕೆ ರಾಜ್ಯದಲ್ಲೂ ಬುಲ್ದೋಜರ್ ಮಾದರಿಯನ್ನು ಜಾರಿಗೆ ತರುವ ಸರಕಾರ ಮಟ್ಟದಲ್ಲಿ ಗಂಭೀರ ಚರ್ಚೆಯಾಗುತ್ತಿದೆ, ಇದೀಗ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸ್ಪೋಟಕ ಮಾಹಿತಿ ನೀಡಿದ್ದಾರೆ.
ಡಿಜೆ ಹಳ್ಳಿ, ಕೆಜೆಹಳ್ಳಿ, ಹುಬ್ಬಳ್ಳಿ ಗಲಭೆ ಬ್ರೇಕ್ ಹಾಕೋದಕ್ಕೆ ರಾಜ್ಯದಲ್ಲೂ ಆಪರೇಷನ್ ಬುಲ್ದೋಜರ್ ಕಾರ್ಯಾಚರಣೆ ಜಾರಿಗೆ ಸ್ವಪಕ್ಷೀಯರ ಒತ್ತಡಕ್ಕೆ ಮಣಿದು ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ . ಈ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗಿದೆ. ದುಷ್ಕರ್ಮಿಗಳನ್ನು ಮಟ್ಟುಗೋಲು ಹಾಕೋದಕ್ಕೆ ಕಷ್ಟಕರವಾಗಿದೆ. ಈ ಮಾದರಿ ಜಾರಿಗೆ ತಂದ್ರೆ ಭಯದಿಂದ ಮುಂದೆ ಇಂತಹ ಕೃತ್ಯವೆಸಲು ಸಾಧ್ಯವಿಲ್ಲ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.