ಮೇಷ
ದಿನವಿಡೀ ವೃತ್ತಿ ಒತ್ತಡ. ಪ್ರೀತಿಪಾತ್ರರ ಸಂಗದಲ್ಲಿ ಒತ್ತಡ ಮರೆಯವಿರಿ. ಅನಿರೀಕ್ಷಿತ ಬೆಳವಣಿಗೆ ಗೊಂದಲ ಉಂಟು ಮಾಡಬಹುದು.
ವೃಷಭ
ಕೆರಿಯರ್‌ನಲ್ಲಿ ಗಮನಾರ್ಹ ಬದಲಾವಣೆ ಉಂಟಾದೀತು. ಭವಿಷ್ಯದ ಕುರಿತು ಹೆಚ್ಚು ಚಿಂತಿಸುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರ.
ಮಿಥುನ
ಯೋಚಿಸಿ ನಿರ್ಧಾರ ತಾಳಿ. ಇಂದಿನ ನಿರ್ಧಾರ ಭವಿಷ್ಯ ನಿರ್ಧರಿಸ ಬಲ್ಲುದು. ವಾಹನ ಚಾಲನೆಯಲ್ಲಿ ತುಸು ಎಚ್ಚರ ವಹಿಸಿರಿ. ಧನಹಾನಿ.
ಕಟಕ
ಯೋಚನೆ ಕಡಿಮೆ ಮಾಡಿ, ಮಾತು ಹೆಚ್ಚು ಆಡಿ. ಮುಕ್ತ ಮಾತಿನಿಂದ ಕೆಲ ಸಮಸ್ಯೆ ಪರಿಹಾರ ಕಾಣುವುದು. ಪ್ರೀತಿಯಲ್ಲಿ ಯಶ ದೊರಕುವುದು.
ಸಿಂಹ
ಸ್ವಲ್ಪ ಮಟ್ಟಿನ ಮಾನಸಿಕ ಖಿನ್ನತೆ ಎದುರಿಸುವಿರಿ. ಸಂಗಾತಿ ಜತೆ ಅಭಿಪ್ರಾಯಭೇದ. ಕಾಲು ನೋವು ಬಾಽಸಬಹುದು.
ಕನ್ಯಾ
ಯಾರ ಜತೆಗೂ ವಾಗ್ವಾದಕ್ಕೆ ಹೋಗದಿರಿ. ಆದಾಯ – ಖರ್ಚಿನ ಮಧ್ಯೆ ಸಮತೋಲನ ಇರಲಿ. ಪ್ರೀತಿಪಾತ್ರರಿಂದ ಬೇಸರ ಅನುಭವಿಸುವಿರಿ.
ತುಲಾ
ಹೆಚ್ಚುವರಿ ಹೊಣೆ. ವೃತ್ತಿಯಲ್ಲಿ ಒತ್ತಡ ಹೆಚ್ಚಳ. ಕೆಲ ಕಾಲದಿಂದ ಕಾಡುತ್ತಿದ್ದ ದೈಹಿಕ ನೋವಿಗೆ ಇಂದು ಶಮನ ದೊರಕೀತು. ಕೌಟುಂಬಿಕ ನಿರಾಳತೆ.
ವೃಶ್ಚಿಕ
ಇತರರ ಮೇಲೆ ಒತ್ತಡ ಹಾಕದಿರಿ. ಅವರೂ ನಿಮ್ಮ ನಿಲುವು ಪಾಲಿಸಲೇ ಬೇಕು ಎಂಬ ಧೋರಣೆ ಬಿಡಿ. ಹೊಂದಾಣಿಕೆಯ ಬದುಕು ಮುಖ್ಯ.
ಧನು
ಧಾರ್ಮಿಕ ಪ್ರಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಉಂಟಾದೀತು. ಖಾಸಗಿ ಬದುಕಲ್ಲಿ ತಳಮಳ ಉಂಟಾದರೂ ಬೇಗ ಶಮನ ಕಾಣಲಿದೆ.
ಮಕರ
ಉತ್ತಮ ಆರ್ಥಿಕ ಪ್ರಗತಿ. ಗಮನ ಸೆಳೆಯುವ ನಿರ್ವಹಣೆ ತೋರುವಿರಿ. ಆದರೂ ಮಾನಸಿಕ ನೆಮ್ಮದಿ ದೂರವಾದೀತು. ಅಸಹನೆ ಹೆಚ್ಚಳ.
ಕುಂಭ
ವೃತ್ತಿಕ್ಷೇತ್ರದಲ್ಲಿ ಸುಧಾರಣೆ. ನಿಮ್ಮ ಜೀವನದ ಅಪೂರ್ವ ವ್ಯಕ್ತಿಯನ್ನು ದೂರ ಮಾಡಿಕೊಳ್ಳಬೇಡಿ. ಸಮನ್ವಯ ಸಾಽಸಿರಿ.
ಮೀನ
ಮಾನಸಿಕ ಒತ್ತಡ. ನಿದ್ರಾಹೀನತೆ ಕಾಡಲಿದೆ. ಆತ್ಮೀಯರ ನಡೆನುಡಿ ಬೇಸರ ತಂದೀತು. ಧಾರ್ಮಿಕ ಆಚರಣೆ ಚಿಂತೆ ಕಡಿಮೆ ಮಾಡಬಹುದು.
ದಿನಭವಿಷ್ಯ: ಪ್ರೀತಿಪಾತ್ರರ ಸಂಗದಲ್ಲಿ ಒತ್ತಡವನ್ನೇ ಮರೆತುಬಿಡ್ತೀರಿ..

