Wednesday, June 7, 2023

Latest Posts

ದಿನಭವಿಷ್ಯ : ಅನಿರೀಕ್ಷಿತ ಧನಲಾಭ, ಖಾಸಗಿ ಬದುಕಿನಲ್ಲಿ ಹೆಚ್ಚು ಉತ್ಸಾಹ

ಮೇಷ
ದಿನವಿಡೀ ಆತ್ಮೀಯರ ಸಂಪರ್ಕದಲ್ಲಿ ಇರುವಿರಿ.  ವೃತ್ತಿಯ ಒತ್ತಡ ಇಂದು ಬಾಧಿಸದು. ವ್ಯವಹಾರದಲ್ಲಿ ಧನಲಾಭ. ಭಾವನಾತ್ಮಕ ಹರ್ಷ.

ವೃಷಭ
ವೃತ್ತಿಕ್ಷೇತ್ರದಲ್ಲಿ ಯಶಸ್ಸು. ಆದಾಯದ ಹೊಸ ಮೂಲ ಹುಡುಕುವಿರಿ. ಆಹಾರದಲ್ಲಿ ಶಿಸ್ತಿರಲಿ, ಇಲ್ಲವಾದರೆ ಹೊಟ್ಟೆ ಕೆಡುವ ಸಂಭವ.

ಮಿಥುನ
ಅನಿರೀಕ್ಷಿತ ಧನಲಾಭ. ಖಾಸಗಿ ಬದುಕಿನಲ್ಲಿ ಹೆಚ್ಚು ಉತ್ಸಾಹ. ಆತ್ಮೀಯರ ಸಂಗದಲ್ಲಿ  ಹುಮ್ಮಸ್ಸು. ಖರ್ಚು ಹೆಚ್ಚಿದರೂ ನಿಮಗದರ ಚಿಂತೆಯಿಲ್ಲ.

ಕಟಕ
ಇತರರ ಭಾವನೆಗೂ ಬೆಲೆ ಕೊಡಿರಿ. ಮುಖ್ಯವಾಗಿ ನಿಮ್ಮ ಕುಟುಂಬಸ್ಥರ ಮಾತುಗಳನ್ನು ಆಲಿಸಿರಿ.  ಆರೋಗ್ಯ ಸಮಸ್ಯೆ ಕಾಡಬಹುದು.

ಸಿಂಹ
ಭಾವನೆಯ ಮೇಲೆ ನಿಯಂತ್ರಣವಿರಲಿ. ಒತ್ತಡದಲ್ಲಿ ಕ್ಷುಲ್ಲಕ ತಪ್ಪು ಎಸಗದಿರಿ. ಇತರರ ಪ್ರಭಾವಕ್ಕೆ  ಒಳಗಾಗಿ ಕಾರ್ಯ ಎಸಗದಿರಿ. ಸ್ವಂತಿಕೆಯಿರಲಿ.

ಕನ್ಯಾ
ಖಾಸಗಿ ಬದುಕಿನಲ್ಲಿ ದಿಟ್ಟ ನಿರ್ಧಾರ ತಾಳಬೇಕಾದ ಸಮಯ ಬಂದಿದೆ. ಇನ್ನೂ ಹಿಂಜರಿಯುವ ಅಗತ್ಯವಿಲ್ಲ. ಇತರರ ಒತ್ತಡಕ್ಕೆ ಮಣಿಯದಿರಿ. ಎಲ್ಲ ಒಳಿತಾಗುವುದು.

ತುಲಾ
ಹಣದ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಿ. ಇತರರ ಪ್ರಲೋಭನೆಯಿಂದ ಅಪರಿಚಿತ ವ್ಯವಹಾರಕ್ಕೆ ಕೈಹಾಕಬೇಡಿ. ಪ್ರತಿಕೂಲ ಪರಿಣಾಮ ಆದೀತು.

ವೃಶ್ಚಿಕ
ಆಪ್ತರೊಂದಿಗೆ ಚಕಮಕಿ ಸಂಭವ. ಸಂಯಮ ಕಾಯ್ದುಕೊಳ್ಳಿ. ಚರ್ಮಕ್ಕೆ ಸಂಬಂಧಿಸಿದ ಕಿರಿಕಿರಿ ಕಾಣಿಸಿಕೊಂಡೀತು. ಆರೋಗ್ಯಯುತ ಆಹಾರ  ಸೇವಿಸಿರಿ.

ಧನು
ಬಯಸಿದ್ದು ಈಡೇರುವುದಿಲ್ಲ. ಆದರೆ ನಿಮಗೆ ನಿರಾಶೆಯಾಗದ ಬೆಳವಣಿಗೆ ಸಂಭವಿಸುವುದು. ಒಟ್ಟಿನಲ್ಲಿ ನೆಮ್ಮದಿ ಹಾಳಾಗದ ದಿನ.

ಮಕರ
ಮನೆಯಲ್ಲಿ ಹೆಚ್ಚುವರಿ ಹೊಣೆಗಾರಿಕೆ ಬೀಳುವುದು. ಅತಿಯಾದ ಒತ್ತಡ ತೆಗೆದುಕೊಳ್ಳದಿರಿ. ಎಲ್ಲವೂ ಸುಲಲಿತವಾಗಿ ನಡೆಯುವುದು.

ಕುಂಭ
ಖಾಸಗಿ ವಿಷಯಗಳು ವೃತ್ತಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಸಂಗಾತಿ ಜತೆಗೆ ಅಭಿಪ್ರಾಯ ಭೇದ ಉಂಟಾದೀತು. ಮಾತು ಹಿತಮಿತವಿರಲಿ.

ಮೀನ
ನಿಮಗೆ ಸಂಬಂಧಪಡದ ವಿಚಾರದಲ್ಲಿ ಕೂಡ ನಿಮ್ಮ ನೆಮ್ಮದಿ ಕೆಡುವುದು. ಆ ಕುರಿತು ಯೋಚಿಸುವುದನ್ನು ಬಿಟ್ಟುಬಿಡಿ. ಜಗದ ಚಿಂತೆ ಹೆಗಲೇರಿಸಿಕೊಳ್ಳದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!