ಭೂ ಹಗರಣ ಪ್ರಕರಣ: ಮಲಯಾಳಂ ನಟ ಬಾಬುರಾಜ್‌ ಬಂಧನಕ್ಕೆ ಹೈಕೋರ್ಟ್ ತಡೆಯಾಜ್ಞೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭೂ ಹಗರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಜನಪ್ರಿಯ ಮಲಯಾಳಂ ನಟ ಬಾಬುರಾಜ್‌ಗೆ ಬಿಗ್ ರಿಲೀಪ್ ಸಿಕ್ಕಿದ್ದು, ಬಂಧನಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೋಥಮಂಗಲಂ ಮೂಲದ ಎಸ್ ಅರುಣ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಟ ಬಾಬುರಾಜ್ ಬಂಧನಕ್ಕೆ ಮುಂದಾಗಿದ್ದರು.ಆದರೆ, ಬಾಬುರಾಜ್ ಪರ ವಕೀಲರು ಬಂಧನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು.
ಬಾಬುರಾಜ್ ಸುಮಾರು 40 ಲಕ್ಷ ರು ಗಳಿಗೆ ಮುನ್ನಾರ್ ಬಳಿಯ ಕಂಬಿಲಿನ್ ರೆಸಾರ್ಟ್ ಭೋಗ್ಯಕ್ಕೆ ಬಿಟ್ಟಿದ್ದರು. ಆದರೆ, ರೆಸಾರ್ಟ್ ಜಾಗದ ಮೇಲಿದ್ದ ಕೇಸ್ ಹಾಗೂ ಸಿವಿಎಲ್ ಕಟ್ಲೆಗಳ ವಿವರಗಳನ್ನು ಮುಚ್ಚಿಟ್ಟರು ಎಂದು ಅರುಣ್ ಕುಮಾರ್ ಆರೋಪಿಸಿದ್ದಾರೆ.
1993ರಲ್ಲಿ ವೃಂದಾವನ್ ಪಟ್ಟಯಾಮ್ಸ್ ಕೈವಶವಾಗಿದ್ದ ಈ ಜಾಗ ಹಲವು ಕೇಸ್ ಎದುರಿಸಿದೆ. ಇಡುಕ್ಕಿ ಮೂಲದ ಲಾಡ್ಜ್ ವೊಂದರ ಹೆಸರಿನಲ್ಲಿ ಬೋಗಸ್ ಟೈಟಲ್ ಡೀಡ್ ಮಾಡಿ, ನಕಲಿ ದಾಖಲೆ ನೀಡೀ ಕಂದಾಯ ಇಲಾಖೆಗೂ ವಂಚನೆ ಮಾಡಲಾಗಿದೆ.ಇಷ್ಟಾದರೂ ಲೀಸ್ ಒಪ್ಪಂದವನ್ನು ಮುರಿದುಕೊಳ್ಳಲು ಬಾಬುರಾಜ್ ಸಿದ್ಧರಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದು, ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ಕಳೆದ 11 ತಿಂಗಳುಗಳಿಂದ ರೆಸಾರ್ಟ್ ಕಡೆಯಿಂದ ಯಾವುದೇ ಮೊತ್ತ ಕೈ ಸೇರಿಲ್ಲ, ನನಗೆ ವಂಚನೆಯಾಗಿದೆ. ಮಾನಹಾನಿ ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಬಾಬುರಾಜ್ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!