ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳನ್ನುಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಈ 16 ಯೂಟ್ಯೂಬ್ ಚಾನೆಲ್‌ಗಳ ಪೈಕಿ 10 ಚಾನೆಲ್‌ಗಳು ಭಾರತದ್ದಾಗಿದ್ದು, 6 ಪಾಕಿಸ್ತಾನಕ್ಕೆ ಸೇರಿವೆ.
ಕೆಲ ದಿನಗಳ ಹಿಂದೆಯಷ್ಟೇ ಪಾಕ್ ಮೂಲಕ 22 ಯೂಟ್ಯೂಬ್ ಸುದ್ದಿವಾಹಿನಿಗಳಿಗೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ ಸಧ್ಯ ಮತ್ತೆ 16 ಯೂಟ್ಯೂಬ್ ಚಾನೆಲ್‌ಗಳ ಪ್ರಸಾರವನ್ನ ರದ್ದುಗೊಳಿಸಿದೆ.
ಸುಳ್ಳು ಸುದ್ದಿ ಪ್ರಸಾರ ಮಾಡುತ್ತಾ ಜನರ ತಪ್ಪಿಸುವ ಕೆಲಸ ಈ ಚಾನೆಲ್‌ಗಳು ಮಾಡುತ್ತಿದ್ವು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದ್ರಂತೆ, ರಾಷ್ಟ್ರೀಯಾ ಭದ್ರತೆಗೆ ದಕ್ಕೆ ಆರೋಪದಡಿ ನಿರ್ಬಂಧಿಸಲಾಗಿತ್ತು.
ಇನ್ನು ಇದರ ಜೊತೆಗೆ 3 ಟ್ವಿಟ್ಟರ್ ಖಾತೆಗಳು, 1 ಫೇಸ್ಬುಕ್ ಖಾತೆ ಮತ್ತು 1 ಸುದ್ದಿ ವೆಬ್ಸೈಟ್ ಸಹ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.