ಯಾರ ಮೇಲೂ ಹಿಂದಿ ಹೇರಿಕೆ ಮಾಡಿಲ್ಲ: ಸಚಿವ ಧರ್ಮೆಂದ್ರ ಪ್ರಧಾನ್​ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಯಾರ ಮೇಲೂ ಇಂತಹದ್ದೇ ಭಾಷೆ ಕಲಿಯಬೇಕು ಅಂತ ಒತ್ತಡ ಹೇರಲು ಸಾಧ್ಯವಿಲ್ಲ. ಹಾಗಾಗಿ ಯಾರ ಮೇಲೂ ಹಿಂದಿ ಭಾಷೆ ಒತ್ತಡ ಹೇರಿಲ್ಲ ಎಂದು ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್​ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದಿ ರಾಷ್ಟ್ರೀಯ ಭಾಷೆ ಅಂತ ಯಾರು ಹೇಳಿಲ್ಲ.ಹಿಂದಿ‌ ಹೇರಿಕೆ ಕೂಡಾ ನಾವು ಮಾಡುವುದಿಲ್ಲ. ಮಾತೃಭಾಷೆಗೆ ಆದ್ಯತೆ ನೀಡುತ್ತೇವೆ. ವಿದ್ಯಾರ್ಥಿಗಳು ಇಚ್ಚೆ ಪಡೋ ಭಾಷೆಯಲ್ಲಿ ಕಲಿಯಬಹುದು.ಹಾಗೆ ಮಾಡಿದರೆ ಕೌಶಲ್ಯ ಮತ್ತು ಪ್ರತಿಭೆ ಹೊರ ಬರುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!