ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 2,568 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.
ದೇಶದಲ್ಲಿ ಒಟ್ಟೂ 19,137 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು ಇಲ್ಲಿಯವರೆಗೆ ಒಟ್ಟೂ 4,30,84,913 ಮಂದಿ ಸೊಂಕಿಗೆ ತುತ್ತಾಗಿದ್ದಾರೆ ಮತ್ತು 5,23,889 ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ಒಟ್ಟೂ 2,911 ಮಂದಿ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಒಟ್ಟೂ 4,25,41,887 ಮಂದಿ ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರವು 98.74% ದಷ್ಟಿದ್ದು ಒಟ್ಟೂ 189.41 ಕೋಟಿಗೂ ಹೆಚ್ಚಿನ ಮಂದಿಗೆ ಲಸಿಕೆ ನೀಡಲಾಗಿದೆ.