ಕ್ರಿಕೆಟಿಗ ವೃದ್ಧಿಮಾನ್ ಸಹಾಗೆ ಬೆದರಿಕೆ: ಪತ್ರಕರ್ತ ‘ಬೋರಿಯಾ ಮಜುಂದಾರ್‌’ಗೆ 2 ವರ್ಷ ನಿಷೇಧ ಹೇರಿದ BCCI

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟಿಗ ವೃದ್ಧಿಮಾನ್ ಸಹಾಗೆ ಬೆದರಿಸಿದ ಆರೋಪದಲ್ಲಿ ಪತ್ರಕರ್ತ ಬೋರಿಯಾ ಮಜುಂದಾರ್ ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.
ಸಂದರ್ಶನಕ್ಕೆ ನಿರಾಕರಿಸಿದ ಬಗ್ಗೆ ಮಜುಂದಾರ್ ಸಹಾ ವಿರುದ್ಧ ಕಟುವಾದ ಮಾತುಗಳನ್ನ ಆಡಿದ್ದರು ಎಂದು ಆರೋಪಿಸಲಾಗಿದೆ.ಪ್ರಕರಣದ ತನಿಖೆಗಾಗಿ ಬಿಸಿಸಿಐ ಮೂವರು ಸದಸ್ಯರ ಸಮಿತಿಯನ್ನ ರಚಿಸಿತ್ತು.
ಇದೀಗ ಮಜುಂದಾರ್ ತಪ್ಪಿತಸ್ಥ ಎಂದು ಸಮಿತಿ ಕಂಡುಕೊಂಡ ಹಿನ್ನೆಲೆ ಕ್ರೀಡಾಂಗಣಗಳ ಒಳಗೆ ಪ್ರವೇಶಿಸದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ನಾವು ತಿಳಿಸಲಿದ್ದೇವೆ. ಅವರಿಗೆ ತವರಿನ ಪಂದ್ಯಗಳಿಗೆ ಮಾಧ್ಯಮ ಮಾನ್ಯತೆ ನೀಡಲಾಗುವುದಿಲ್ಲ ಮತ್ತು ಅವರನ್ನ ಕಪ್ಪುಪಟ್ಟಿಗೆ ಸೇರಿಸಲು ನಾವು ಐಸಿಸಿಗೆ ಪತ್ರ ಬರೆಯುತ್ತೇವೆ. ಅವರೊಂದಿಗೆ ತೊಡಗದಂತೆ ಆಟಗಾರರನ್ನು ಕೇಳಲಾಗುವುದು’ ಎಂದು ಬಿಸಿಸಿಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!