‘ದಂಗಲ್​’ ರೆಕಾರ್ಡ್ ಬ್ರೇಕ್ ಮಾಡಿದ ಕೆಜಿಎಫ್​ -2: ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುತ್ತಿರುವ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಫ್ಟರ್ 2 ಇದೀಗ ಹಿಂದಿಯಲ್ಲಿ ಮತ್ತೊಂದು ಸಾಧನೆ ಮಾಡಿದೆ. ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಅಮೀರ್ ಖಾನ್ ನಟನೆಯ ‘ದಂಗಲ್​’ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿದೆ.
ಹಿಂದಿ ಅವತರಣಿಕೆಯಲ್ಲಿ ಪ್ರಭಾಸ್ ನಟನೆಯ ಬಾಹುಬಲಿ 2 ಚಿತ್ರ 510.99 ಕೋಟಿ ರೂ. ಗಳಿಕೆ ಮಾಡಿದ್ದು, ದಂಗಲ್​ 387.38 ಕೋಟಿ ರೂ. ಗಳಿಸಿತ್ತು. ಆದರೆ, ಇದೀಗ ಕೆಜಿಎಫ್​ ಚಾಪ್ಟರ್ 2, 391.65 ಕೋಟಿ ರೂ.ಗಳಿಕೆ ಮಾಡುವ ಮೂಲಕ ದಂಗಲ್​ ರೆಕಾರ್ಡ್​ ಧೂಳಿಪಟ ಮಾಡಿದೆ.
ಉಳಿದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಟೈಗರ್​ ಜಿಂದಾ ಹೈ 339.16 ಕೋಟಿ, ಅಮೀರ್ ಖಾನ್ ನಟನೆಯ ಪಿಕೆ 340.8 ಕೋಟಿ, ರಣಬೀರ್ ಕಪೂರ್​ ನಟನೆಯ ಸಂಜು 342.53 ಕೋಟಿ ರೂಗಳಿಕೆ ಮಾಡಿವೆ.
ಪ್ರಪಂಚದಾದ್ಯಂತ ಅಮೀರ್ ಖಾನ್ ನಟನೆಯ ದಂಗಲ್​ 2024 ಕೋಟಿ ರೂ. ಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದ್ದು, ಪ್ರಭಾಸ್ ನಟನೆಯ ಬಾಹುಬಲಿ-2, 1,810 ಕೋಟಿ ರೂ. ಹಾಗೂ ಯಶ್ ನಟನೆಯ ಕೆಜಿಎಫ್​ ಚಾಪ್ಟರ್-2 ಇಲ್ಲಿಯವರೆಗೆ 1,056 ಕೋಟಿ ರೂ. ಗಳಿಕೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here