ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮದ್ಯ ಮಾರಾಟಗಾರರ ಸಂಘ ನಾಳೆಯಿಂದ ವಿಭಾಗವಾರು ಮೇ.19ರವರೆಗೆ ಮುಷ್ಕರ ನಡೆಸೋದಕ್ಕೆ ನಿರ್ಧರಿಸಿದ್ದು, ಹೀಗಾಗಿ ನಾಳೆಯಿಂದ ಮೇ.19ರವರೆಗೆ ರಾಜ್ಯಾಧ್ಯಂತ ಎಣ್ಣೆ ಸಿಗೋದು ಡೌಟ್ ಆಗಿದೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ಹೆಗ್ಡೆಯವರು, ಕೆ ಎಸ್ ಪಿ ಸಿ ಎಲ್ ಎಂ.ಡಿ, ಮದ್ಯ ಮಾಲೀಕರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ, ಅಬಕಾರಿ ಸಚಿವರ ಗಮನಕ್ಕೆ ತರೋಣ ಅಂದ್ರೇ ಸಿಗ್ತಾ ಇಲ್ಲ. ಹೀಗಾಗಿ ನಾಳೆಯಿಂದ ವಿಭಾಗವಾರು ಮುಷ್ಕರ ನಡೆಸೋದಕ್ಕೆ ನಿರ್ಧರಿಸಲಾಗಿದೆ ಎಂದರು.
ಮೇ.6ರ ನಾಳೆ ಗುಲ್ಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಮುಷ್ಕರವನ್ನು ಮದ್ಯ ಮಾರಾಟಗಾರರು ನಡೆಸಲಿದ್ದಾರೆ. ಹೀಗಾಗಿ ಬೀದರ್, ಗುಲ್ಬರ್ಗಾ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಾಳೆ ಎಣ್ಣೆ ಸಿಗೋದು ಡೌಟ್ ಆಗಿದೆ.
ಮೇ.10ರಂದು ಹೊಸಪೇಟೆ ವಿಭಾಗದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇದರಿಂದಾಗಿ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ನಿಮ್ಮ ನೆಚ್ಚಿನ ಬ್ರಾಂಡ್ ಸಿಗೋದಿಲ್ಲ.
ಮೇ.12ರಂದು ಮೈಸೂರು ವಿಭಾಗದ ಜಿಲ್ಲೆಗಳಲ್ಲಿ, ಮೇ.17ರಂದು ಬೆಂಗಳೂರು ವಿಭಾಗದ ಜಿಲ್ಲೆಗಳಾದಂತ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಎಣ್ಣೆ ಸರಿಯಾಗಿ ಸಪ್ಲೈ ಇಲ್ಲದೇ ಸಿಗೋದು ಡೌಟ್ ಎನ್ನಲಾಗುತ್ತಿದೆ.