ಮೇಷ.
ನಿಮ್ಮ ಕ್ರಿಯಾಶೀಲತೆ ಎಲ್ಲರ ಗಮನವನ್ನು ಸೆಳೆಯಲಿದೆ. ವೃತ್ತಿ ಕ್ಷೇತ್ರದಲ್ಲಿ ವಾಗ್ವಾದಕ್ಕೆ ಆಸ್ಪದ ನೀಡದಿರಿ. ಆರೋಗ್ಯ ಸುಸ್ಥಿರ.
ವೃಷಭ
ಫಲಪ್ರದ ದಿನ. ಆದರೂ ದಿನವಿಡೀ ಒತ್ತಡ. ವಿರಾಮದ ಅವಽಯಲ್ಲಿ ಪ್ರೀತಿಪಾತ್ರರ ಸಂಗದಲ್ಲಿ ಸಂಭ್ರಮಿಸುವ ಅವಕಾಶ. ಖರ್ಚು ಹೆಚ್ಚುವುದು.
ಮಿಥುನ
ಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಉತ್ಸಾಹಕ್ಕೆ ಕೊರತೆಯಿಲ್ಲ. ಕೌಟುಂಬಿಕ ಹೊಣೆ ಅಽಕ. ದಂಪತಿಗಳಿಗೆ ಶುಭ ಬೆಳವಣಿಗೆ ಕಾಣಲಿದೆ.
ಕಟಕ
ದೀರ್ಘಕಾಲದ ಬಳಿಕ ಆರ್ಥಿಕ ದೃಢತೆ. ಹೂಡಿಕೆಯಿಂದ ಲಾಭ. ಇತರರು ಹೇಳುವುದನ್ನು ಬೇಗ ನಂಬುತ್ತೀರಿ. ಪರಾಮರ್ಶೆ ಒಳಿತು.
ಸಿಂಹ
ಕೆಲಸದಲ್ಲಿ ಸಂಕಷ್ಟ. ಆದರೆ ಖಾಸಗಿ ಬದುಕಿಗೆ ತೊಂದರೆ ಉಂಟಾಗದು. ಕುರುಡಾಗಿ ಅನ್ಯರನ್ನು ಅನುಕರಿಸಬೇಡಿ. ಸ್ವಂತಿಕೆಗೆ ಗಮನಕೊಡಿ.
ಕನ್ಯಾ
ಕೆಲಸದಲ್ಲಿ ಅಡ್ಡಿ. ಮಾನಸಿಕ ಖಿನ್ನತೆ. ವಿಶ್ವಾಸದ ಕೊರತೆ. ದಂಪತಿ ಮಧ್ಯೆ ವಾಗ್ವಾದ ನಡೆದೀತು. ಏಕಾಂಗಿತನ ಆಪ್ತವಾಗಬಹುದು.
ತುಲಾ
ವೃತ್ತಿಯಲ್ಲಿ ಒತ್ತಡ. ಹಾಗಾಗಿ ಅಸಹನೆ ಹೆಚ್ಚು. ಉದ್ಯಮ ಕ್ಷೇತ್ರ ವಿಸ್ತಾರಕ್ಕೆ ಅವಕಾಶವಿದೆ. ಎಲ್ಲದರ ಮಧ್ಯೆ ಮನಶ್ಯಾಂತಿಗೆ ತುಡಿಯುವಿರಿ.
ವೃಶ್ಚಿಕ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಆಸ್ತಿಪಾಸ್ತಿ ಖರೀದಿಗೆ ಯೋಚಿಸಿದ್ದರೆ ಅನುಕೂಲ ಸಮಯ. ಬಂಧುಗಳ ಸಹಕಾರ. ಹೊಟ್ಟೆ ನೋವು ಕಾಡೀತು.
ಧನು
ವೃತ್ತಿಯಲ್ಲಿ ಎಲ್ಲವೂ ಸಲೀಸು. ಆದರೆ ಮನೆಯಲ್ಲಿ ಅಭಿಪ್ರಾಯ ಭೇದ, ವಾಗ್ವಾದ ಸಂಭವ. ಮುಖ್ಯ ವಿಷಯದಲ್ಲಿ ಇಬ್ಬಂದಿತನ ಕಾಡಲಿದೆ.
ಮಕರ
ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗುವ ಅವಕಾಶ. ಸ್ವಂತ ಉದ್ಯೋಗಿಗಳಿಗೆ ಯಶಸ್ಸು. ಆರೋಗ್ಯ ಸಮಸ್ಯೆ ಶಮನ. ಸಾಂಸಾರಿಕ ಸೌಹಾರ್ದ.
ಕುಂಭ
ಹಣದ ವಿಚಾರದಲ್ಲಿ ಎಚ್ಚರದ ಹೆಜ್ಜೆಯಿಡಿ. ರಿಸ್ಕ್ ಇರುವ ಕ್ಷೇತ್ರದಲ್ಲಿ ಹಣ ಹೂಡಬೇಡಿ. ಕೆಲವರ ಟೀಕೆ ಎದುರಿಸುವಿರಿ. ಕುಟುಂಬಸ್ಥರ ಬೆಂಬಲ.
ಮೀನ
ಪ್ರಮುಖ ವ್ಯಕ್ತಿಯ ಸಂಪರ್ಕ ಸಾಽಸುವಿರಿ. ನಿಮ್ಮ ಕಾರ್ಯಕ್ಕೆ ನೆರವು ದೊರಕಲಿದೆ. ದೈಹಿಕ ನೋವು ಇದ್ದರೆ ಇಂದು ಶಮನವಾಗಲಿದೆ.
ದಿನಭವಿಷ್ಯ: ನಿಮ್ಮ ಕ್ರಿಯಾಶೀಲತೆ ಎಲ್ಲರ ಗಮನಸೆಳೆಯಲಿದೆ, ಫಲಪ್ರದ ದಿನ

