Sunday, June 4, 2023

Latest Posts

ದಿನಭವಿಷ್ಯ: ಇಂದು ಇಡೀ ದಿನ ಭಾವನೆಗಳ ಜೊತೆ ಸಂಘರ್ಷ!

ಮೇಷ
ಗೊಂದಲಭರಿತ ದಿನ. ಯಾವ ಕಾರ್ಯವೂ ಪೂರ್ಣವಾಗದು. ಮನಸ್ಸಿನಲ್ಲೂ ಹಲವಾರು ದ್ವಂದ್ವಗಳು. ಬಂಧುತ್ವದ ಬಗ್ಗೆ ಜಿಜ್ಞಾಸೆ ಕಾಡುತ್ತದೆ.

ವೃಷಭ
ನಿಮಗೆ ಕೊಟ್ಟ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಪ್ರತಿಸ್ಪರ್ಧಿಗಳು ಹಿಂದೆ ಬೀಳುತ್ತಾರೆ. ಕೌಟುಂಬಿಕ ಸಹಕಾರ.

ಮಿಥುನ
ವಿನಯವು ಒಳ್ಳೆಯದೆ. ಆದರೆ ಕೆಲವು ಪ್ರಸಂಗಗಳಲ್ಲಿ ನೀವು ಬಾಸ್‌ನಂತೆ ವರ್ತಿಸಬೇಕು. ಇಲ್ಲವಾದರೆ ಕೆಲಸ ನಡೆಯದು.

ಕಟಕ
ಇಂದು ಸಂಬಂಧಗಳ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಳ್ಳುವಿರಿ. ಆತ್ಮೀಯ ಸಂಬಂಧ ವೊಂದರ ಮಧ್ಯೆ ಬಿರುಕು ಮೂಡುವ ಸಾಧ್ಯತೆಗಳಿವೆ.

ಸಿಂಹ
ಶ್ರಮ ಪಡಿ. ಫಲ ಸಿಕ್ಕೇ ಸಿಗುವುದು. ಯಾವುದೇ ಶ್ರಮ ಪಡದೆ ಫಲ ಸಿಗಬೇಕೆಂದು ಬಯಸದಿರಿ. ಯಶಸ್ಸಿಗೆ ಅಡ್ಡಹಾದಿ ಹಿಡಿಯು ವುದು ಸಲ್ಲದು.

ಕನ್ಯಾ
ಹಳೆಯ ತಪ್ಪುಗಳ ಪರಿಣಾಮ ಈಗ ಗೋಚರಿಸಬಹುದು. ಅದನ್ನು ಸರಿಪಡಿಸಲು ಯತ್ನಿಸಿ. ಅಗತ್ಯ ಬಿದ್ದಲ್ಲಿ ಕ್ಷಮೆ ಕೇಳಲು ಹಿಂಜರಿಯಬೇಡಿ.

ತುಲಾ
ಭಾವನೆಗಳ ಸಂಘರ್ಷ. ನಿಮ್ಮ ಭಾವುಕತೆ ಕೆಲವರಲ್ಲಿ ಅಚ್ಚರಿ ಮೂಡಿಸಬಹುದು. ಮನೆಯಲ್ಲಿ ಹೊಣೆಗಾರಿಕೆ ಹೆಚ್ಚುವುದು.

ವೃಶ್ಚಿಕ
ಗೆಲುವಿನ ಸಂಭ್ರಮದಲ್ಲಿ  ಅಹಂಕಾರ, ದುರ್ವರ್ತನೆ ಸಲ್ಲದು. ಅದು ನಿಮಗೆ ಹಾನಿ ತಂದೀತು. ಕೆಲವು ಆತ್ಮೀಯ ಸಂಬಂಧವನ್ನು ಕಾಪಾಡಿಕೊಳ್ಳಬೇಕು.

ಧನು
ಮಾನಸಿಕ ಅಂತರ್ಮಥನ. ನಿಮ್ಮ ನಡೆನುಡಿಯನ್ನು ಪರಾಮರ್ಶಿಸಿಕೊಳ್ಳಿ. ಕೆಲವು ವರ್ತನೆಗಳನ್ನು ತ್ಯಜಿಸಲು ಪ್ರಯತ್ನಿಸಿ. ಅದರಿಂದ ನೆಮ್ಮದಿ.

ಮಕರ
ಉತ್ಸಾಹದಿಂದಲೆ ದಿನದ ಆರಂಭ. ಆದರೆ ದಿನ ಕಳೆದಂತೆ ನಿಮ್ಮ ಉತ್ಸಾಹ ಕುಂದಿಸುವ ಬೆಳವಣಿಗೆ ಉಂಟಾಗಬಹುದು. ಕೌಟುಂಬಿಕ ಭಿನ್ನಮತ.

ಕುಂಭ
ಇತರರ ಜತೆ ಸಮಸ್ಯೆಯನ್ನು ಹಂಚಿಕೊಂಡು ಮನಸ್ಸು ಹಗುರವಾಗಿಸಲು ಯತ್ನಿಸುವಿರಿ. ಸಂಜೆ ವೇಳೆಗೆ ಮಾನಸಿಕ ಒತ್ತಡ ನಿವಾರಣೆ.

ಮೀನ
ಅಧಿಕ ಕೆಲಸ, ಅಧಿಕ ಒತ್ತಡ. ಆದರೆ  ನಿಮ್ಮ ಕಾರ್ಯವನ್ನು ನೀವು ಮೆಚ್ಚುವಿರಿ. ಹಾಗಾಗಿ ಇದು ಹೊರೆಯೆನಿಸದು. ಕೌಟುಂಬಿಕ ಶಾಂತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!