ಹೊಸದಿಗಂತ ಡಿಜಿಟಲ್ ಡೆಸ್ಕ್
ಪಶ್ಚಿಮ ದೆಹಲಿಯಲ್ಲಿನ ತನ್ನ ಮನೆಯಲ್ಲಿ ಬಂಧಿಸುವಾಗ ಪಂಜಾಬ್ ಪೊಲೀಸರು ತನಗೆ ಪೇಟ (ಟರ್ಬನ್) ಧರಿಸಲು ಅವಕಾಶ ನೀಡಲಿಲ್ಲ ಎಂದು ಬಿಜೆಪಿ ನಾಯಕ ತೇಜೀಂದರ್ ಬಗ್ಗಾ ಶನಿವಾರ ಗಂಭೀರ ಆರೋಪ ಮಾಡಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಪಂಜಾಬ್ ಅಧಿಕಾರಿಗಳಿಂದ ವರದಿ ಕೇಳಿದೆ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಅವರು ಈ ಕುರಿತು ಪಂಜಾಬ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ನಾಯಕ ತಜೀಂದರ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದಾಗ ಪೇಟ ಧರಿಸಲು ಅವಕಾಶ ನೀಡದಿರುವ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ಸೂಚಿಸಲಾಗಿದೆ.
ಬಗ್ಗಾ ಅವರನ್ನು ಬಂಧಿಸುವಾಗ ಪಂಜಾಬ್ ಪೊಲೀಸರು ಅವರಿಗೆ ಪೇಟವನ್ನು ಕಟ್ಟಲು ಸಹ ಅನುಮತಿಸಲಿಲ್ಲ, ಜೊತೆಗೆ ಬಗ್ಗಾ ಅವರ ತಂದೆಗೆ ಥಳಿಸಿದರು ಎಂದು ಪಂಜಾಬ್ ಬಿಜೆಪಿ ಘಟಕ ಸಹ ಆರೋಪಿಸಿದೆ. ಪೇಟವು ಸಿಖ್ಖರ ಧಾರ್ಮಿಕ ನಂಬಿಕೆಯಾಗಿದ್ದು, ಬಹುತೇಕ ಸಿಖ್ಖರು ಪೇಟವಿಲ್ಲದೆ ಹೊರಗೆ ಹೊರಡುವುದಿಲ್ಲ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ