Saturday, November 8, 2025

HEALTH | ಶುಗರ್ ಬರೋ ಮುನ್ನ ನಿಮ್ಮ ದೇಹ ಈ ರೀತಿಯ ಎಚ್ಚರಿಕೆ ಕೊಡುತ್ತೆ! ಹುಷಾರ್

ಇಂದಿನ ವೇಗದ ಜೀವನಶೈಲಿ, ಅಹಾರದಲ್ಲಿನ ಅಸಮತೋಲನ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಮಧುಮೇಹವು ಈಗ ವಯಸ್ಸಿನ ಗಡಿಯನ್ನು ದಾಟಿ ಯುವಕರನ್ನೂ ಕಾಡುತ್ತಿದೆ. ಹಿಂದೆ 50ರ ನಂತರ ಕಾಣಿಸುತ್ತಿದ್ದ ಈ ಕಾಯಿಲೆ, ಈಗ 30ರೊಳಗೇ ಪ್ರಾರಂಭವಾಗುತ್ತಿದೆ. ಮೇದೋಜೀರಕ ಗ್ರಂಥಿ ಇನ್ಸುಲಿನ್ ಸರಿಯಾಗಿ ಉತ್ಪಾದಿಸದಿದ್ದಾಗ ಅಥವಾ ದೇಹ ಅದನ್ನು ಬಳಸಲಾರದಿದ್ದಾಗ ಶುಗರ್ ಲೆವಲ್ ಏರಿಕೊಳ್ಳುತ್ತದೆ. ಈ ಕಾರಣದಿಂದ ಹೃದಯ, ಕಣ್ಣು, ನರಗಳು ಹಾಗೂ ಮೂತ್ರಪಿಂಡಗಳು ತೀವ್ರ ಹಾನಿಗೊಳಗಾಗುತ್ತವೆ. ಆದ್ದರಿಂದ, ಕಾಯಿಲೆ ಬರುವ ಮೊದಲು ದೇಹ ನೀಡುವ ಎಚ್ಚರಿಕೆ ಸಂಕೇತಗಳನ್ನು ಗಮನಿಸುವುದು ಅತ್ಯಂತ ಅಗತ್ಯ.

  • ಊಟದ ಬಳಿಕ ದೃಷ್ಟಿ ಮಸುಕಾಗುವುದು ಮತ್ತು ತಲೆನೋವು: ಊಟದ ನಂತರ ದೃಷ್ಟಿ ಮಸುಕಾಗುವುದು ಅಥವಾ ತಲೆನೋವು ಕಾಣಿಸಿಕೊಂಡರೆ, ಶುಗರ್ ಮಟ್ಟದಲ್ಲಿ ಏರಿಳಿತವಾಗಿರುವ ಸೂಚನೆ ಆಗಬಹುದು.
  • ಪದೇಪದೇ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ: ಹೆಚ್ಚು ಬಾಯಾರಿಕೆ ಹಾಗೂ ಪದೇಪದೇ ಮೂತ್ರ ವಿಸರ್ಜನೆ ಆಗುತ್ತಿದ್ದರೆ, ಇದು ಮಧುಮೇಹದ ಪ್ರಮುಖ ಲಕ್ಷಣ. ಶರೀರದಲ್ಲಿನ ಹೆಚ್ಚುವರಿ ಸಕ್ಕರೆ ಮೂತ್ರದ ಮೂಲಕ ಹೊರಹಾಕಲು ದೇಹ ಯತ್ನಿಸುತ್ತದೆ.
  • ಆಲಸ್ಯ ಮತ್ತು ದಣಿವು: ಉತ್ತಮ ನಿದ್ರೆ, ಆಹಾರ ಇದ್ದರೂ ನಿರಂತರ ದಣಿವು ಅಥವಾ ಉತ್ಸಾಹದ ಕೊರತೆ ಕಂಡುಬಂದರೆ, ದೇಹ ಗ್ಲೂಕೋಸ್‌ನ್ನು ಶಕ್ತಿಯಾಗಿ ಪರಿವರ್ತಿಸಲು ವಿಫಲವಾಗಿದೆ ಎಂದು ಅರ್ಥ.
  • ಕುತ್ತಿಗೆ ಮತ್ತು ಕಂಕುಳಲ್ಲಿ ಕಪ್ಪು ಕಲೆಗಳು: ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಾಗ ಚರ್ಮದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ಇನ್ಸುಲಿನ್ ಪ್ರತಿರೋಧದ ಸ್ಪಷ್ಟ ಸಂಕೇತವಾಗಿದೆ.
  • ಹೆಚ್ಚಾದ ಹಸಿವು ಮತ್ತು ಸಿಹಿತಿಂಡಿಗಳ ಬಯಕೆ: ತಿಂದ ತಕ್ಷಣ ಹಸಿವಾಗುವುದು ಅಥವಾ ಸಿಹಿತಿಂಡಿಗಳಿಗೆ ಅತಿಯಾದ ಆಸೆ ಉಂಟಾಗುವುದು ರಕ್ತದಲ್ಲಿನ ಸಕ್ಕರೆಯ ಬದಲಾವಣೆಗಳಿಂದಾಗುತ್ತದೆ.
  • ತೂಕ ಹೆಚ್ಚಳ ಮತ್ತು ಹೊಟ್ಟೆಯ ಕೊಬ್ಬು: ಹೊಟ್ಟೆ ಸುತ್ತಲೂ ಕೊಬ್ಬು ಹೆಚ್ಚಾದರೆ ಅಥವಾ ತೂಕ ಹಠಾತ್ ಹೆಚ್ಚಾದರೆ, ಅದು ಮಧುಮೇಹದ ಮುನ್ನೆಚ್ಚರಿಕೆಯ ಲಕ್ಷಣವಾಗಿರಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
error: Content is protected !!