ಮುಂಬೈ ದಾಳಿಗೆ ಕುಸಿದ ಚೆನ್ನೈ : 98ರನ್​​ ಟಾರ್ಗೆಟ್​ ನೀಡಿದ ಧೋನಿ ಪಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಮಾಡು ಇಲ್ಲವೆ ಮಡಿಯಾಗಿದ್ದ ಇಂದಿನ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 97 ರನ್​​ಗಳಿಗೆ ಆಲೌಟ್​ ಆಗಿದೆ. ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(36ರನ್​) ಏಕಾಂಗಿ ಹೋರಾಟ ನಡೆಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಧೋನಿ ಬಾಯ್ಸ್​ ಮೊದಲ ಓವರ್​​ನಿಂದಲೇ ಪೆವಿಲಿಯನ್​ ಪರೇಡ್​ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕಾನ್ವೆ(0) ತಾವು ಎದುರಿಸಿದ ಮೊದಲ ಎಸೆತದಲ್ಲೇ ಡೆನಿಯಲ್​ ಸ್ಯಾಮ್ಸ್​​ ಎಲ್​ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಮೊಯಿನ್​​ ಅಲಿ(0) ಕೂಡ ಸ್ಯಾಮ್ಸ್​ ಓವರ್​​ನಲ್ಲೇ ಔಟಾದರು.ಇದರ ಬೆನ್ನಲ್ಲೇ ಬಂದ ರಾಬಿನ್​ ಉತ್ತಪ್ಪ(1) ಕೂಡ ಬುಮ್ರಾ ಓವರ್​​ನಲ್ಲಿ ಎಲ್​​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಋತುರಾಜ್ ಕೂಡ ಕೇವಲ 7ರನ್​​ಗಳಿಸಿ ಸ್ಯಾಮ್ಸ್​ ಬಲೆಗೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲೂ ರಾಯುಡು 10ರನ್​​ಗಳಿಸಿ ಮೆರ್ಡಿತ್​ ಎಸೆತದಲ್ಲಿ ಔಟಾದರು.
ಮುಂಬೈ ಪರ ಬೌಲಿಂಗ್​​ನಲ್ಲಿ ಅಬ್ಬರಿಸಿದ ಡ್ಯಾನಿಯಲ್​ ಸ್ಯಾಮ್ಸ್​​​ 3ವಿಕೆಟ್​, ಮೆರ್ಡಿತ್​, ಕಾರ್ತಿಕೇಯ 2 ವಿಕೆಟ್​ ಪಡೆದರೆ , ರಮಣದೀಪ್​ ಸಿಂಗ್​ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!