ಉಲ್ಟಾ ಹೊಡೆದ್ರಾ ಎಲಾನ್​ ಮಸ್ಕ್​?: ಸಂಚಲನ ಮೂಡಿಸಿತು ಆ ಒಂದು ಟ್ವೀಟ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ 44 ಬಿಲಿಯನ್ ಡಾಲರ್​ ಕೊಟ್ಟು ಟ್ವಿಟರ್ ಕಂಪನಿಯನ್ನು ಖರೀದಿಸುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯವು ಲಕ್ಷಣಗಳು ಕಾಣಿಸಿವೆ.
ಹೌದು, ಎಲಾನ್​ ಮಸ್ಕ್​ ಮಾಡಿರುವ ಆ ಒಂದು ಟ್ವೀಟ್​ ಈಗ ಎಲ್ಲ ಉಲ್ಟಾ ಆಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ.
ಟ್ವಿಟರ್​ ಡೀಲ್​ ತಾತ್ಕಾಲಿಕವಾಗಿ ಪೆಂಡಿಂಗ್​ನಲ್ಲಿ ಇರಲಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರ ಪೈಕಿ ಫೇಕ್​ ಅಕೌಂಟ್​ಗಳ ಸಂಖ್ಯೆ ಶೇ. 5ಕ್ಕಿಂತ ಕಡಿಮೆ ಇರಬೇಕಾಗಿದ್ದು, ಆ ಕುರಿತ ಲೆಕ್ಕಾಚಾರ ಬಾಕಿ ಇರುವುದರಿಂದ ಖರೀದಿ ಪ್ರಕ್ರಿಯೆಯನ್ನು ಸ್ಥಗಿತದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಲಾನ್ ಈ ಟ್ವೀಟ್, ಟ್ವಿಟರ್ ಷೇರುಗಳಲ್ಲಿ ಶೇ. 20 ಕುಸಿತಕ್ಕೆ ಕಾರಣವಾಗಿದೆ. ಅದಾಗ್ಯೂ ಎಲಾನ್​ ಮಸ್ಕ್ ತಮಾಷೆಗೆ ಹೀಗೆ ಹೇಳಿರಬಹುದಾ ಅಥವಾ ನಿಜವಾಗಿಯೂ ಖರೀದಿ ಕುರಿತು ಎರಡನೇ ಯೋಚನೆ ಮಾಡುತ್ತಿದ್ದಾರಾ ಎಂಬುದು ಇನ್ನೂ ಖಚಿತವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!