ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಸ್ಎಸ್ಎಲ್ಪಿ ಪರೀಕ್ಷಾ ಫಲಿತಾಂಶ ಮೇ 19ರಂದು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷಾ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ ಮೇ 19ರಂದು ಪ್ರಕಟಿಸಲು ನಿರ್ಧರಿಸಲಾಗಿದೆ
ಎಸ್ಎಸ್ಎಲ್ಸಿ ಪರೀಕ್ಷೆ ಮಾ. 28 ರಂದು ಆರಂಭವಾಗಿತ್ತು. ಏಪ್ರಿಲ್ 11 ರಂದು ಪರೀಕ್ಷೆ ಪೂರ್ಣಗೊಂಡಿತ್ತು. ಅಂದುಕೊಂಡಂತೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮೇ 12 ರೊಳಗೆ ಫಲಿತಾಂಶ ಹೊರ ಬೀಳುತ್ತಿತ್ತು. ಮೌಲ್ಯಮಾಪನಕ್ಕೆ ನೊಂದಣಿ ಮಾಡಿದ್ದ ಬಹುತೇಕ ಶಿಕ್ಷಕರು ಮೌಲ್ಯಮಾಪನಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ವಿಳಂಬವಾಗಿತ್ತು. ಹೀಗಾಗಿ ಬಹುತೇಕ ಏಪ್ರಿಲ್ ತಿಂಗಳಲ್ಲಿಯೇ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ಮೇಗೆ ವಿಸ್ತರಣೆಯಾಗಿದೆ.