ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಉಷ್ಣ ಗಾಳಿ ತೀವ್ರ ಏರಿಕೆಯಾಗಿದ್ದು, ಶನಿವಾರ 44 ಡಿಗ್ರಿ ಸೆಲ್ಸಿಯಷ್ಟಿದ್ದು, ಭಾನುವಾರ 46-47 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಶನಿವಾರ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದೆ ಎಂದು ದೆಹಲಿಯ ಸಫ್ದಾರ್ ಜಂಗ್ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿತ್ತು.
ದೆಹಲಿಯ ನಜಾಫ್ ಗಢದಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 46.1 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿತ್ತು. ಸಾಮಾನ್ಯ ತಾಪಮಾನಕ್ಕಿಂತ ಈ ವರ್ಷ ಜಾಫರ್ ಪುರ್ ನಲ್ಲಿ 45.6 ಡಿಗ್ರಿ ಸೆಲ್ಸಿಯಸ್ ಹಾಗೂ ಮುಂಗೇಶ್ ಪುರ್ ನಲ್ಲಿ 45.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.