ರಾಷ್ಟ್ರಗೀತೆಯ ಬಗ್ಗೆ ಗೌರವ ಇರದಿದ್ದರೆ ಈ ರಾಷ್ಟ್ರದಲ್ಲಿ ಇರುವ ಅಧಿಕಾರ ನಿಮಗಿಲ್ಲ: ಶ್ರೀಶೈಲ ಶ್ರೀ

ಹೊಸದಿಗಂತ ವರದಿ, ಗದಗ:

ರಾಷ್ಟ್ರದ ವಿಷಯ ಬಂದಾಗ ಧರ್ಮಾತೀತವಾಗಿ ಜ್ಯಾತ್ಯಾತೀತವಾಗಿ ರಾಷ್ಟ್ರಪ್ರೇಮ ಇರಬೇಕು. ರಾಷ್ಟ್ರಭಕ್ತಿಗೆ, ರಾಷ್ಟ್ರಕ್ಕೆ ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಆಗಿದೆ ಎಂದು ಶ್ರೀಶೈಲ ಪೀಠದ ಜ.ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಭಗತ್ಪಾದರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಕುರಿತ ವಿಚಾರವಾಗಿ ಮಾತನಾಡಿದ ಅವರು ಈ ರಾಷ್ಟ್ರದ ಅನ್ನ ತಿಂದವರು, ನೀರು ಕುಡಿದವರು ರಾಷ್ಟ್ರದ ಗೀತೆ ಹಾಡುವದಕ್ಕೆ ಅಭ್ಯಂತರವಿದ್ದರೆ ಈ ರಾಷ್ಟ್ರದಲ್ಲಿ ಅವರಿಗೆ ಇರುವದಕ್ಕೆ ಅಧಿಕಾರ ಏನಿದೆ ಎಂದ ಶ್ರೀಗಳು ದೇಶದ ವಿಷಯ ಬಂದಾಗ ಇಂತಹ ವಿಷಯಗಳನ್ನು ಸಮರ್ಥನೆ ಮಾಡಿಕೊಳ್ಳಲಾಗುವುದಿಲ್ಲ, ಅವರು ರಾಷ್ಟ್ರಗೀತೆ ಹಿಂದೇಟು ಹಾಕುವುದು ಸೂಕ್ತವಲ್ಲ ಇದನ್ನು ಖಂಡಿಸುತ್ತೆವೆ. ರಾಷ್ಟ್ರಗೀತೆಯ ಬಗ್ಗೆ ಎಲ್ಲರಿಗೂ ಗೌರವ ಇರಬೇಕು ಎಂಬುದು ನಮ್ಮ ವಾದವಾಗಿದೆ ಎಂದು ಶ್ರೀಶೈಲ ಪೀಠದ ಶ್ರೀಗಳ ಹೇಳಿದರು.
ಜ್ಞಾನವಾಪಿ ಮಸೀದಿ ಸರ್ವೇ ವಿಚಾರ ಕುರಿತು ಮಾತನಾಡಿದ ಅವರು , ನ್ಯಾಯಾಲಯದ ಆದೇಶ ಸ್ವಾಗತಾರ್ಹವಾಗಿದೆ. ಸರ್ವೇ ಕಾರ್ಯ ಪ್ರಾಮಾಣಿಕವಾಗಿ ಆಗಲಿ. ಸತ್ಯ ಏನಿದೆ ಅದು ಹೊರ ಬರಬೇಕಾಗಿದೆ. ಅಲ್ಲಿನ ಸತ್ಯ ವರದಿಯನ್ನು ಸರ್ವೇ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಕೆ ಆಗಲಿ. ಅದರ ಮೇಲೆ ಕೋರ್ಟ್ ತೀರ್ಮಾನ ಕೈಗೊಳ್ಳಲು ಅನಕೂಲವಾಗುತ್ತೆ. ವರದಿ ಇಲ್ಲದೇ, ಜಾಗ ನೋಡದೇ, ಕೋರ್ಟ್ ತೀರ್ಪು ನೀಡಲು ಸಧ್ಯವಿಲ್ಲ. ಈ ನಿಟ್ಟಿನಲ್ಲಿ ಆರಕ್ಷಕರ ಬಲ ಪಡೆದು ಅಧಿಕಾರಿಗಳು ಸರ್ವೇ ಕಾರ್ಯ ಮಾಡಬೇಕು. ಕೋರ್ಟ್‌ದಿಂದ ಯೋಗ್ಯ ತೀರ್ಮಾನದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.

ಜ್ಞಾನವಾಪಿ ಮಸೀದಿ ಹಿಂಭಾಗದಲ್ಲಿ ಹಿಂದೂ ದೇವಸ್ಥಾನದ ಕೆತ್ತನೆ ಇದೆ.ನಾನೂ ಕಣ್ಣಾರೇ ಕಂಡಿದ್ದೇನೆ. ಹೀಗಾಗಿ ದೇವಸ್ಥಾನ ಕುರುಹ ಇರೋ ಶಂಕೆಯಿದೆ. ಎರಡು ದಿನದ ಹಿಂದೆ ಕಾಶಿಗೆ ಹೋದಾಗ ಅಲ್ಲಿನ ಪಳಿಯುಳಿಕೆ ಗಮನಿಸಿದ್ದೇವೆ. ಜ್ಞಾನವಾಪಿ ನಾಲ್ಕನೆ ದ್ವಾರದ ಹಿಂಭಾಗದಲ್ಲಿ ನೋಡಿದಾಗ ದೇವಸ್ಥಾನ ಕಟ್ಟಡದ ಲಕ್ಷಣಗಳು ಕಂಡು ಬಂದಿವೆ. ಆದರೆ,ಒಳಗಡೆ ಇನ್ನೂ ಏನೇನಿದೆ ಎಂಬುದು ಗೊತ್ತಿಲ್ಲ. ಮಸೀದಿ ಕೆತ್ತನೆ ಬೇರೆ. ದೇವಾಲಯಗಳ ಕೆತ್ತನೆ ಬೇರೆಯಾಗಿದೆ ಹಿಂದೂ ದೇವಸ್ಥಾನ ಕೆತ್ತನೆ ಹಿಂಭಾಗದಲ್ಲಿ ಮಾತ್ರ ನಮಗೆ ಕಂಡು ಬಂದಿದೆ ಎಂದರು.

ಭಾರತ ದೇಶ ಹಲವಾರು ಧರ್ಮ ಸಂಪ್ರದಾಯ ಒಳಗೊಂಡ ದೇಶವಾಗಿದೆ. ಈ ದೇಶಗಳಲ್ಲಿ ತಮ್ಮ ತಮ್ಮ ಧರ್ಮದ ಅನುಗುಣವಾಗಿ ಎಲ್ಲರಿಗೂ ಸಂವಿಧಾನ ಬದ್ಧ ಅಧಿಕಾರವಿದೆ. ಹಾಗಂತ ಇನ್ನೊಂದು ಧರ್ಮವರನ್ನು ತುಳಿದು, ಹತ್ತಿಕ್ಕಿ ಒಂದು ಧರ್ಮದವರು ಮೇಲೆ ಬರಬೇಕು ಅನ್ನುವ ದಾಷ್ಠ್ಯತನ ಇದೆಯಲ್ಲ ಅದು ಹಿಂದೆ, ಇಂದು, ಮುಂದೆಯೂ ಸೂಕ್ತವಲ್ಲ ಎಂದು ಶ್ರೀಗಳು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!