ಹೊಸದಿಗಂತ ವರದಿ, ಹುಬ್ಬಳ್ಳಿ
ಮಹಿಳೆಯೋರ್ವಳ ಮೇಲೆ ಅತ್ಯಾಚಾರ ವೇಸಗಿದ ಆರೋಪಿಯ ಮೇಲೆ ಧಾರವಾಡ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಒಂದು ತಿಂಗಳಾದರೂ ಸಹ ಆರೋಪಿಯ ಬಂಧಿಸಿಲ್ಲ. ಪೊಲೀಸ್ ಠಾಣಾ ಆಧಿಕಾರಿ ಆರೋಪಿಯಿಂದ 1 ಲಕ್ಷ ರೂ ಹಣ ಪಡೆದಿದ್ದಾರೆ ಎಂದು ಕುರುಬ ಸಮಾಜದ ಸಂಘದ ಮುಖಂಡ ಶಿವಾನಂದ ಮುತ್ತಣ್ಣವರ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಕಲಘಟಗಿ ತಾಲೂಕಿನ ಗ್ರಾಮವೊಂದರ ಮಹಿಳೆಯೋರ್ವಳ ಮೇಲೆ ಅದೇ ಗ್ರಾಮದ ಮೊಹಮ್ಮದ ಸಾಬ್ ಎಂಬಾತ ನಿರಂತರವಾಗಿ ಅತ್ಯಾಚಾರ ವೆಸಗಿದ್ದಾನೆ. ಈ ವಿಷಯ ತಿಳಿದ ಮಹಿಳೆಯ ಗಂಡ ಧಾರವಾಡ ಮಹಿಳಾ ಠಾಣೆಯಲ್ಲಿ ಏ.24 ರಂದೇ ಪ್ರಕರಣ ದಾಖಲಿಸಿದ್ದಾರೆ ಆದರೂ ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಷಯವನ್ನು ಪತಿಗೆ ತಿಳಿಸಿದರೆ ಗಂಡ ಮತ್ತು ಮಕ್ಕಳನ್ನು ಕೊಲ್ಲುತವುದಾಗಿ ಎಂದು ಜೀವ ಬೆದರಿಕೆ ಸಹ ಹಾಕಿದ್ದಾನೆ ಎಂದು ಅವರು ಆರೋಪಿಸಿದರು.
ಪ್ರಕರಣ ದಾಖಲು ಮಾಡಿದಕ್ಕಾಗಿ ಮಹಿಳೆಯ ಗಂಡನ ಮೇಲೆ ಆರೋಪಿ ಕುಟುಂಬಸ್ಥರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಸಹ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.
ಆರೋಪಿಯನ್ನು ತಕ್ಷಣವೇ ಬಂಧಿಸಿಬೇಕು. ಪ್ರಕರಣ ದಾಖಲಿಸಿದರು ಸಹ ಆರೋಪಿಯನ್ನು ಬಂಧಿಸದ ಧಾರವಾಡ ಮಹಿಳಾ ಪೊಲೀಸ್ ಠಾಣಾಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರಿಗೆ ಆಗ್ರಹಿಸಿದರು. ಆರೋಪಿಯ ಬಂಧನವಾಗದಿದ್ದಲ್ಲಿ ಧಾರವಾಡ ಎಸ್ ಪಿ ಕಚೇರಿಯ ಎದುರು ಕುಟುಂಬ ಸಮೇತ ಸತ್ಯಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಯಮಣಪ್ಪ ಚವಳಿಕೇರಿ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ