ಕಲ್ಯಾಣಮಂಟಪದಿಂದ ಪ್ರಿಯಕರನ ಜೊತೆ ಪರಾರಿಯಾದ ವಧು! ವಿವಾಹಕ್ಕೆ ಸಿದ್ಧವಾಗಿದ್ದ ವರ ಕಂಗಾಲು

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:
ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ತಾಳಿ ಕಟ್ಟುವ ಕೊನೆ ಘಳಿಗೆಯಲ್ಲಿ ವಧು ತಲೆ ಸುತ್ತಿ ಬಿದ್ದು ನಾಟಕ ಮಾಡುವ ಮೂಲಕ ಮದುವೆ ಮುರಿದಿದ್ದ ಘಟನೆ ನಡೆದಿತ್ತು. ಇಂದು ಚಿಕ್ಕಬಳ್ಳಾಪುರದಲ್ಲಿಯೂ ಅಂತಹದ್ದೇ ಒಂದು ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾದ ವಧು ರಾತ್ರೋ ರಾತ್ರಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದರಿಂದ ಮದುವೆ ಮುರಿದುಬಿದ್ದಿದೆ.
ಗೌರಿಬಿದನೂರು ನಾಗರೆಡ್ಡಿ ಬಡಾವಣೆಯ ಯುವತಿ ವೆನ್ನಲ ಎಂಬುವವಳ ವಿವಾಹ ಕರೇಕಲ್ಲಹಳ್ಳಿಯ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಗುರು ಹಿರಿಯರ ನಿಶ್ಚಯಿಸಿದಂತೆ ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿ ಕಲ್ಯಾಣಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನೇರವೇರಿತ್ತು. ಆದರೆ ರಾತ್ರೋರಾತ್ರಿ ವಧು ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ.
ಇದರಿಂದ ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಹೀಗಾಗಿ ವರನ ಸಂಬಂಧಿಕರು ಗೌರಿಬಿದನೂರು ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದು ವಧು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಸದ್ಯ ವಧುವರರ ಸಂಬಂಧಿಕರು ಪೊಲೀಸ್ ಠಾಣೆ ಬಳಿ ಸೇರಿದ್ದು. ಪರಾರಿಯಾದ ವಧು ಹಾಗೂ ಪ್ರಿಯಕರ ಪ್ರವೀಣ್ ಸಹ ಠಾಣೆಗೆ ಬರುವುದಾಗಿ ತಿಳಿಸಿದ್ದಾರಂ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!