ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ಗೆ ಸೇರಿದ 3 ಜನ ಉಗ್ರರನ್ನು ಜಮ್ಮು ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ. ಈ ಘಟನೆಯಲ್ಲಿ ಪೋಲೀಸ್ ಸಿಬ್ಬಂದಿಯೊಬ್ಬ ಹುತಾತ್ಮನಾಗಿದ್ದಾನೆ.
ಕಾಶ್ಮೀರದ ಬಾರಾಮುಲ್ಲಾದ ಕ್ರೀರೀ ಪ್ರದೇಶದ ನಜೀಭಟ್ ಕ್ರಾಸಿಂಗ್ ನಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಹತರಾದ ಉಗ್ರರ ಜಾಗದಲ್ಲಿದ್ದ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಾಶ್ಮೀರ ಪೋಲೀಸರು ಟ್ವಿಟ್ ಮಾಡಿದ್ದಾರೆ. ಕಳೆದ 3-4 ತಿಂಗಳುಗಳಲ್ಲಿನ ಒಟ್ಟೂ 22 ಮಂದಿ ಪಾಕಿಸ್ತಾನಿ ಉಗ್ರರನ್ನು ಹೊಡೆದು ಹಾಕಿರುವುದಾಗಿ ಕಾಶ್ಮೀರ ಪೋಲೀಸರು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.