ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನಲ್ಲಿ ಕುಳ್ಳಗಿರುವ ಮುಷ್ಯರು ಅನೇಕ ಮಂದಿಯಿದ್ದಾರೆ. ಅದರಲ್ಲಿ ಒಬ್ಬರು ವಿಶ್ವದ ಅತ್ಯಂತ ಕುಳ್ಳಗಿರುವ ವ್ಯಕ್ತಿ ಎಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. ಕೊಲಂಬಿಯಾದ ಎಡ್ವರ್ಡ್ ಹೆರ್ನಾಂಡೆಜ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ದಾಖಲೆಯನ್ನು ದೋರ್ ಬಹದ್ದೂರ್ ಖಪಾಂಗಿ ಮುರಿದಿದ್ದಾರೆ.
ದೋರ್ ಬಹದ್ದೂರ್ ನೇಪಾಳದ ಕಠ್ಮಂಡುವಿನ 17 ವರ್ಷದ ಬಾಲಕ ವಿಶ್ವದ ಅತ್ಯಂತ ಕುಳ್ಳಗಿರುವ ಯುವಕ ಎಂದು ಗಿನ್ನಿಸ್ ದಾಖಲೆ ಬರೆದಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಯ ಸದಸ್ಯರು ಮಾರ್ಚ್ 23 ರಂದು ಕಠ್ಮಂಡುವಿನಲ್ಲಿ ಅವರನ್ನು ಅಳತೆ ಮಾಡಿದ್ದು, ಎತ್ತರ 73.43 ಸೆಂ (2 ಅಡಿ 4.9 ಇಂಚು) ಎಂದು ಕಂಡುಬಂದಿದೆ. ದೋರ್ ಬಹದ್ದೂರ್ ಸಹೋದರ ನಾರಾ ಬಹದ್ದೂರ್ ಖಪಾಂಗಿ ಮಾತನಾಡಿ, ನಮ್ಮ ಸಹೋದರನಿಗೆ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ನೇಪಾಳ ಪ್ರವಾಸೋದ್ಯಮ ಮಂಡಳಿಯ ಸಿಇಒ ಧನಂಜಯ್ ರೆಗ್ಮಿ ಅವರು ಕಠ್ಮಂಡುವಿನಲ್ಲಿ ನಡೆದ ಸಮಾರಂಭದಲ್ಲಿ ಖಪಾಂಗಿಗೆ ಪ್ರಮಾಣಪತ್ರವನ್ನು ನೀಡಿದರು.
Meet 17-year-old Dor Bahadur Khapangi from Nepal, our new shortest teenager record holderhttps://t.co/0igbAPiOD6
— Guinness World Records (@GWR) May 24, 2022
ದೋರ್ ಬಹದ್ದೂರ್ ರೈತ ಕುಟುಂಬಕ್ಕೆ ಸೇರಿದವರಾಗಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೋರ್ ಬಹದ್ದೂರ್ ಹುಟ್ಟಿದಾಗಿನಿಂದ ಎಲ್ಲವೂ ಚೆನ್ನಾಗಿತ್ತು. ಆದರೆ ಏಳನೇ ವಯಸ್ಸಿಗೆ ಬಂದ ನಂತರ ಬೆಳೆವಣಿಗೆ ಕಾಣಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.