ಹೊಸದಿಗಂತ ವದರಿ, ಮಂಡ್ಯ
ವಿಜ್ಞಾನವನ್ನು ವಿಕೃತವಾಗಿ ಬಳಸಿಕೊಂಡಲ್ಲಿ ಜಗತ್ತಿಗೆ ಅಪಾಯ ಕಾದಿದೆ. ವಿಜ್ಞಾನ ಹಣೆತೆಯೂ ಹೌದು, ಬೆಂಕಿಯೂ ಹೌದು. ಅದನ್ನು ಬಳಸಿಕೊಳ್ಳುವ ಮನೋಧರ್ಮವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಜನರು ಮುಂದಾಗಬೇಕಿದೆ ಎಂದು ಕಾರ‌್ಯಕ್ರಮದಲ್ಲಿ ಖ್ಯಾತ ಚನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಅವರು ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಹಾಗೂ ಮಂಡ್ಯ ಜಿಲ್ಲಾ ಘಕದ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲಿಯೂ ವೈಜ್ಞಾನಿಕ ವಿಚಾರಗಳನ್ನು ಧಾರೆ ಎರೆಯುವ ಮೂಲಕ ಆದರ್ಶ ವ್ಯಕ್ತಿಯನ್ನಾಗಿ ಮಾಡುವಲ್ಲಿ ವಿಜ್ಞಾನದ ಪಾತ್ರ ಸಾಕಷ್ಟಿದೆ. ವಿಜ್ಞಾನವು ಪರೀಕ್ಷಿಸಿ ಪರಿಶೀಲಿಸಿ, ಸಾಕ್ಷೀಕರಿಸುವ ಪ್ರಮುಖವಾದ ಕ್ಷೇತ್ರವಾಗಿದೆ. ವಿಜ್ಞಾನಕ್ಕೆ ಖಾಚಿತ್ಯತೆ ಇದೆ. ಕುತೂಹಲಗಳನ್ನು ಹೆಚ್ಚಿಸುತ್ತದೆ. ಪ್ರಚೋದನೆಗೊಳಪಡಿಸುತ್ತದೆ. ಹೊಸ ಹೊಸ ವಿಷಯಗಳಿಗೆ ಅವಕಾಶ ಮಾಡಿಕೊಡುತ್ತದೆ. ಹೊಸ ಕಾಲಕ್ಕೆ ಹೊಸ ತಲೆಮಾರಿಗೆ ವಿಜ್ಞಾನ ಅತ್ಯಂತ ಅವಶ್ಯಕವಾಗಿದೆ. ಚಿಂತನೆಗಳು ಏಕಾಂಗಿತನವಾಗಿರಬೇಕು. ಅಂತರಂಗದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಅದನ್ನು ಕಾರ‌್ಯರೂಪಕ್ಕೆ ತರಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ವಿಜ್ಞಾನ ಮತ್ತು ಧರ್ಮವನ್ನು ಬೇರೆಯಾಗಿ ಮಾಡಬಾರದು. ಮನುಕುಲದ ಮುಗ್ಧತೆಯ ನಾಶವಾಗುತ್ತಿದೆ. ವಿಜ್ಞಾನ ತನ್ನನ್ನು ತಾನು ಅರ್ಥ ಮಾಡಿಸುವಲ್ಲಿ ಹೆಚ್ಚು ಪೂರಕವಾಗಿದೆ. ಅನೇಕ ವೈಜ್ಞಾನಿಕ ಸತ್ಯವನ್ನು ನಾವು ಮರೆಮಾಚುತ್ತಿದ್ದೇವೆ. 12ನೇ ಶತಮಾನದ ವಚನಗಳಲ್ಲೂ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳು ಪ್ರಭಲವಾಗಿವೆ. ಕುವೆಂಪು ಹಾಗೂ ಅನೇಕ ಚಿಂತಕರು ವೈಜ್ಞಾನಿಕ ಚಿಂತನೆಗಳನ್ನು ಮಂಡಿಸಿರುವುದು ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಿದರು.
ಸಮೂಹ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಅನೇಕ ಅಂಶಗಳಿಂದ ಯುವಕರು ದೂರವಾಗಿರಬೇಕಿದೆ. ನಮ್ಮನ್ನು ನಾವು ತೀರ್ಮಾನಿಸಿಕೊಳ್ಳುವ ಮನೋಭೂಮಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ಕೆ.ಮಾಯಿಗೌಡ ಅವರ ಮಕ್ಕಳಿಗೇಕೆ ವೈಚಾರಿಕತೆ ಎನ್ನುವ ಕೃತಿ ಬಿಡುಗಡೆ ಮಾಡಿದರು. ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜು ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಪ್ರೊಘಿ. ರವಿವರ್ಮಕುಮಾರ್, ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಪರಿಷತ್ತಿನ ಪ್ರಮುಖರಾದ ಪ್ರಭಾವತಿ ಎಸ್.ಡಿ., ಸುನಂದಾ ಜಯರಾಂ, ಚಿಕ್ಕಹನುಮಂತೇಗೌಡ, ವಿ.ಟಿ. ಸ್ವಾಮಿ, ಮಂಡ್ಯ ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯಘಿ, ಮನುಕುಮಾರ್, ಹಿತೇಶ್ ಎನ್., ಸ್ವಪ್ನ ಕೆ.ವಿ. ಕೆಂಪರಾಜು, ವಂಸತ ವೆಂಕಟಾಚಲಯ್ಯಘಿ, ಅಂಬರಹಳ್ಳಿ ಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ