ಮುಂದಿನ ಆವೃತ್ತಿಯಲ್ಲಿ ಸಿಗೋಣ: ಎಲ್ಲರಿಗೂ ಥ್ಯಾಂಕ್ಸ್​ ಎಂದ ವಿರಾಟ್​​ ಕೊಹ್ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್​​ ಕ್ವಾಲಿಫೈಯರ್​​ನಲ್ಲಿ ಸೋಲು ಕಾಣುವ ಮೂಲಕ ಬೆಂಗಳೂರು ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಇದೀಗ ವಿರಾಟ್​​ ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

‘ಕೆಲವೊಮ್ಮೆ ಗೆಲ್ಲುತ್ತೀರಿ, ಕೆಲವೊಮ್ಮೆ ಸೋಲುತ್ತೀರಿ. ಆದರೆ, 12th ಮ್ಯಾನ್ ಆರ್ಮಿಯಾಗಿ ನಿವೆಲ್ಲರೂ ಅಭಿಯಾನದ ಉದ್ದಕ್ಕೂ ನಮಗೆ ಬೆಂಬಲ ನೀಡುತ್ತೀರಿ. ಜೊತೆಗೆ ಕ್ರಿಕೆಟ್​​ ಅನ್ನು ವಿಶೇಷವಾಗಿಸಿದ್ದೀರಿ. ಕಲಿಕೆ ಎಂದಿಗೂ ನಿಲ್ಲಲ್ಲ ಎಂದಿರುವ ವಿರಾಟ್​, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಹಾಗೂ ಫ್ರಾಂಚೈಸಿಯ ಭಾಗವಾಗಿರುವ ಎಲ್ಲರಿಗೂ ಥ್ಯಾಂಕ್ಸ್​. ಮುಂದಿನ ಆವೃತ್ತಿಯಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. 16 ಪಂದ್ಯಗಳಿಂದ ಕೇವಲ 341ರನ್​​ಗಳಿಕೆ ಮಾಡಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿಕೊಂಡಿವೆ.

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗಮನಾರ್ಹ ಪ್ರದರ್ಶನದೊಂದಿಗೆ ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿತ್ತು. ಆದರೆ, ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದೆ. ಇದರ ಬೆನ್ನಲ್ಲೇ ತಂಡದ ಮಾಜಿ ಕ್ಯಾಪ್ಟನ್​ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!