Sunday, November 9, 2025

FOOD | ಪಚ್ಚ ಪುಳಿ ರಸಂ: ತಮಿಳುನಾಡಿನ ಸ್ಪೆಷಾಲಿಟಿನೇ ಇದು! ಬಾಯಿ ಚಪ್ಪರಿಸಿಕೊಂಡು ತಿಂತೀರಾ ಪಕ್ಕಾ

ದಕ್ಷಿಣ ಭಾರತದ ಊಟದ ಅಸ್ತಿತ್ವವೇ ರಸಂ! ಆದರೆ ಅದರಲ್ಲಿ ಪಚ್ಚ ಪುಳಿ ರಸಂ (Pacha Puli Rasam) ಒಂದು ವಿಶಿಷ್ಟ ಸ್ಥಾನ ಪಡೆದಿದೆ. “ಪಚ್ಚ” ಎಂದರೆ ಹಸಿ, “ಪುಳಿ” ಎಂದರೆ ಹುಣಸೆ. ಅಂದರೆ ಈ ರಸಂ ಬೇಯಿಸದೇ, ಕಚ್ಚಾ ಹುಣಸೆ ನೀರಿನಿಂದ ತಯಾರಾಗುತ್ತದೆ. ಈ ರುಚಿಕರ ರಸಂ ತಮಿಳುನಾಡಿನಿಂದ ವಿಶಿಷ್ಟ ರುಚಿಯನ್ನು ಸಾರಿ ಹೇಳುತ್ತೆ.

ಬೇಕಾಗುವ ಪದಾರ್ಥಗಳು:

ಹುಣಸೆ — ಒಂದು ನಿಂಬೆ ಅಳತೆ
ಬೆಳ್ಳುಳ್ಳಿ — 5 ರಿಂದ 6
ಹಸಿಮೆಣಸು — 2
ಉಪ್ಪು — ರುಚಿಗೆ ತಕ್ಕಂತೆ
ಸಾಸಿವೆ — ½ ಟೀ ಸ್ಪೂನ್
ಮೆಣಸು ಪುಡಿ — ½ ಟೀ ಸ್ಪೂನ್
ಜೀರಿಗೆ — ½ ಟೀ ಸ್ಪೂನ್
ಎಣ್ಣೆ — 1 ಟೀ ಸ್ಪೂನ್
ಕರಿಬೇವು — ಸ್ವಲ್ಪ
ಕೊತ್ತಂಬರಿ ಸೊಪ್ಪು — ಅಲಂಕರಿಸಲು

ತಯಾರಿಸುವ ವಿಧಾನ:

ಮೊದಲಿಗೆ ಹುಣಸೆಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಇಡಿ. ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಮಿಕ್ಸಿಯಲ್ಲಿ ಸಣ್ಣದಾಗಿ ರುಬ್ಬಿಕೊಳ್ಳಿ ಅಥವಾ ಕುಟ್ಟಾಣಿಯಲ್ಲಿ ಜಜ್ಜಿಕೊಂಡರು ಸಾಕು.

ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ,ಕರಿಬೇವು ಹಾಕಿ. ಬಳಿಕ ಬೆಳ್ಳುಳ್ಳಿ-ಮೆಣಸಿನ ಮಿಶ್ರಣವನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವವವರೆಗೆ ಹುರಿಯಿರಿ. ಈಗ ಹುಣಸೆಹಣ್ಣು ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಈ ರಸಂ ಅನ್ನು ಕುದಿಸಬಾರದು. ಹಸಿ ಹುಳಿ ರುಚಿಯೇ ಇದರ ವೈಶಿಷ್ಟ್ಯ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ಬಡಿಸಬಹುದು.

error: Content is protected !!