ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣದ ಜವಾಬ್ದಾರಿ ಟಾಟಾ ಗ್ರೂಪ್‌ ಹೆಗಲಿಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟಾಟಾ ಪ್ರಾಜೆಕ್ಟ್ಸ್ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದುಕೊಂಡಿದೆ.
ಒಪ್ಪಂದದ ಭಾಗವಾಗಿ, ಟಾಟಾ ಪ್ರಾಜೆಕ್ಟ್ಸ್ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್, ರನ್ ವೇ, ಮೂಲಸೌಕರ್ಯ, ರಸ್ತೆಗಳು, ಲ್ಯಾಂಡ್ ಸೈಡ್ ಸೌಲಭ್ಯಗಳು ಮತ್ತು ಇತರ ಪೂರಕ ಕಟ್ಟಡಗಳನ್ನು ನಿರ್ಮಿಸಲಿದೆ ಎಂದು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ವೈಐಎಪಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವಿಸ್ ಡೆವಲಪರ್ ಜ್ಯೂರಿಚ್ ಏರ್ ಪೋರ್ಟ್ ಇಂಟರ್ ನ್ಯಾಷನಲ್ ಎಜಿ ಯ ಅಂಗಸಂಸ್ಥೆಯಾದ ಯಮುನಾ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದೆ. 2019 ರಲ್ಲಿ ಜ್ಯೂರಿಚ್ ಏರ್ ಪೋರ್ಟ್ ಇಂಟರ್ ನ್ಯಾಷನಲ್ ಎಜಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ಪಡೆದಿದೆ.

2020ರ ಅಕ್ಟೋಬರ್ 7 ರಂದು ಉತ್ತರ ಪ್ರದೇಶ ಸರಕಾರವು ಅಭಿವೃದ್ಧಿಯನ್ನು ಪ್ರಾರಂಭಿಸಲು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಜಿನಿಯರಿಂಗ್ ಮತ್ತು ನಿರ್ಮಾಣವನ್ನು ಕೈಗೊಳ್ಳಲು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಅನ್ನು ಆಯ್ಕೆ ಮಾಡಿದೆ. ದೊಡ್ಡ ಮೂಲಸೌಕರ್ಯ ಯೋಜನೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಅನುಭವವನ್ನು ಹೊಂದಿರುವ ಪಟ್ಟಿ ಮಾಡಿದ ಮೂರು ಕಂಪನಿಗಳ ಪೈಕಿ ಟಾಟಾ ಪ್ರಾಜೆಕ್ಟ್ಸ್‌ಅನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಡೆವಲಪರ್ ಪ್ರಕಾರ, ಹೊಸ ವಿಮಾನ ನಿಲ್ದಾಣವು 2024ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

ನಾವು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಪಿಸಿ ಕೆಲಸಕ್ಕಾಗಿ ಟಾಟಾ ಪ್ರಾಜೆಕ್ಟ್ಸ್ ನೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ. ಈ ಒಪ್ಪಂದದೊಂದಿಗೆ ನಮ್ಮಯೋಜನೆಯು ಮುಂದಿನ ಹಂತವನ್ನು ಪ್ರವೇಶಿಸುತ್ತದೆ. ಪ್ರದೇಶದಲ್ಲಿ ನಿರ್ಮಾಣ ಚುಟುವಟಿಕೆಗಳು ವೇಗಗೊಳ್ಳಲಿದೆ’ ಎಂದು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟೋಫ್ ಸ್ಕ್ನೇಲ್ ಮನ್ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!