ಹೊಸದಿಗಂತ ವರದಿ ಕೊಪ್ಪಳ:
ಆಸ್ತಿ ವಿವಾದಕ್ಕೆ ಅಣ್ಣನೇ ತಮ್ಮನನ್ನು ಗುಂಡಿಟ್ಟು ಕೊಂದಿರುವ ಭೀಕರ ಘಟನೆ ತಾಲೂಕಿನ ಕವಲೂರಿನಲ್ಲಿ ಜರಗಿದೆ.
ಕವಲೂರು ಗ್ರಾಮದ ವಿನಾಯಕ ದೇಸಾಯಿ (38) ಮೃತ ವ್ಯಕ್ತಿ. ಇವರ ಅಣ್ಣ ರಾಘವೇಂದ್ರ ದೇಸಾಯಿ ತನ್ನ ಬಂದೂಕಿನಿಂದ ಕೊಲೆ ಮಾಡಿದ್ದಾನೆ.
ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ಬಹುದಿನದಿಂದ ಜಗಳವಿತ್ತು. ವಿವಾದ ಇರುವಾಗಲೇ ರಾಘವೇಂದ್ರ ದೇಸಾಯಿ ಹೊಲದಲ್ಲಿ ಬಿತ್ತನೆ ಮಾಡಿದ್ದಾನೆ. ಅದನ್ನು ತೆರವು ಮಾಡಲು ವಿನಾಯಕ ದೇಸಾಯಿ ತೆರಳಿದಾಗ ಪರಸ್ಪರ ಜಗಳವಾಗಿದೆ. ಇದರಿಂದ ಉದ್ರಿಕ್ತಗೊಂಡ ರಾಘವೇಂದ್ರ ದೇಸಾಯಿ ತನ್ನ ಪರವಾನಗಿ ಹೊಂದಿದ ಬಂದೂಕಿನಿಂದ ವಿನಾಯಕನಿಗೆ ಗುಂಡು ಹೊಡೆದು ಸಾಯಿಸಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಅಳವಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕೊಲೆ ಮಾಡಿ ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.