ಹೊಸದಿಗಂತ ವರದಿ, ವಿಜಯಪುರ:
ಹಾಡಹಗಲೆ ಆಟೋ ಚಾಲಕನೊಬ್ಬನನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ಗೋಳಗುಮ್ಮಟ್ ಎದುರು ನಡೆದಿದೆ.
ನಗರದ ರೈಲ್ವೆ ಸ್ಟೇಷನ್ ನಿವಾಸಿ ವೀರೇಶ ಶಿವಾನಂದ ಬಂಥನಾಳ (22) ಹತ್ಯೆಯಾಗಿರುವ ಆಟೋ ಚಾಲಕ.
ಶಿವಾನಂದ ಬಂಥನಾಳ ಈತನನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹತ್ಯೆಗೈದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.