January17, 2026
Saturday, January 17, 2026
spot_img

ಅಭಿಷೇಕ್-ಗಿಲ್‌ ಬ್ಯಾಟಿಂಗ್ ನೋಡಿ ಸೂರ್ಯಕುಮಾರ್ ಯಾದವ್ ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದು ಟೀಮ್ ಇಂಡಿಯಾ ಶನಿವಾರ ಹೊಸ ಉತ್ಸಾಹದಲ್ಲಿ ಮಿಂಚಿತು. ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಯುವ ಶೂಟರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಪ್ರದರ್ಶನವನ್ನು ಮೆಚ್ಚಿ ಹೊಗಳಿದರು. “ಇಬ್ಬರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ, ಅವರ ಆಟವೇ ಎಲ್ಲರ ಮುಖದಲ್ಲಿ ನಗು ತರಿಸುತ್ತದೆ,” ಎಂದು ಅವರು ನಗುಮುಖದಿಂದ ಹೇಳಿದರು.

ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಭಾರತ 4.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತು. ಆದರೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಮುಂದುವರಿಯಲಿಲ್ಲ. ಗಿಲ್ 16 ಎಸೆತಗಳಲ್ಲಿ 29 ರನ್ ಗಳಿಸಿದ್ದು, ಅಭಿಷೇಕ್ 13 ಎಸೆತಗಳಲ್ಲಿ 23 ರನ್ ಗಳಿಸಿದರು. ಪಂದ್ಯದ ನಂತರ ಮಾತನಾಡಿದ ಸೂರ್ಯಕುಮಾರ್, “ಇಬ್ಬರು ಪಿಚ್‌ನ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಯಾವುದೇ ಅನಾವಶ್ಯಕ ಅಪಾಯ ತೆಗೆದುಕೊಳ್ಳದೆ ಪವರ್‌ಪ್ಲೇ ಮುಗಿಸಿದರು. ಇಂತಹ ಯುವ ಆಟಗಾರರು ಕಠಿಣ ಪರಿಸ್ಥಿತಿಗಳಿಂದಲೇ ಕಲಿಯುತ್ತಾರೆ,” ಎಂದರು.

ನಮ್ಮ ಬಳಿಯಲ್ಲಿರುವ ಆಟಗಾರರು ವಿಭಿನ್ನ ಕೌಶಲ್ಯ ಹೊಂದಿದ್ದಾರೆ. ಹುಡುಗರು ಮೈದಾನದಲ್ಲಿ ಒಟ್ಟಿಗೆ ಆಟ ಆಡುವುದನ್ನು ಆನಂದಿಸುತ್ತಿದ್ದಾರೆ. ಕಳೆದ ಎಂಟು ತಿಂಗಳುಗಳಿಂದ ನಾವು ನಮ್ಮ ಯೋಜನೆಗೆ ಬದ್ಧವಾಗಿದ್ದೇವೆ. ಈ ತಂಡದಲ್ಲಿ ಸ್ನೇಹದ ಬಲವೂ ಇದೆ. ಯುವ ಬೌಲರ್‌ಗಳು ಜಸ್ಪ್ರೀತ್ ಬುಮ್ರಾ ಅವರಿಂದ ಕಲಿಯುತ್ತಿದ್ದಾರೆ,” ಎಂದು ಹೇಳಿದರು.

ಐದು ಪಂದ್ಯಗಳ ಸರಣಿಯಲ್ಲಿ ಅಭಿಷೇಕ್ ಶರ್ಮಾ 163 ರನ್‌ಗಳೊಂದಿಗೆ ಅತ್ಯಧಿಕ ರನ್‌ ಗಳಿಸಿದ ಆಟಗಾರರಾಗಿ ಸರಣಿಯ ‘ಪ್ಲೇಯರ್ ಆಫ್ ದ ಸೀರೀಸ್’ ಗೌರವಕ್ಕೆ ಪಾತ್ರರಾದರು. ಅವರ ಹಿಂದೆ 132 ರನ್‌ ಗಳಿಸಿ ಶುಭ್‌ಮನ್ ಗಿಲ್ ಎರಡನೇ ಸ್ಥಾನ ಪಡೆದರು.

Must Read

error: Content is protected !!