ಹೊಸದಿಗಂತ ವರದಿ, ಸುಬ್ರಹ್ಮಣ್ಯ:
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಭಾರೀ ಸಂಖ್ಯೆಯಲ್ಲಿ ಭಕ್ತ ಜನರು ಆಗಮಿಸಿದ್ದರು. ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ಶ್ರೀ ದೇವರು ಒಳಾಂಗಣ ಪ್ರವೇಶಿಸುವ ಪುಣ್ಯ ದಿನ ರಜಾದಿನವಾದ ಆದಿತ್ಯವಾರ ಬಂದುದರಿಂದ ಕ್ಷೇತ್ರಕ್ಕೆ ಭಕ್ತ ಸಂದೋಹವೇ ಹರಿದು ಬಂದಿತ್ತು.
ಶನಿವಾರ ರಾತ್ರಿಯೇ ಕ್ಷೇತ್ರಕ್ಕೆ ಅತ್ಯಧಿಕ ಭಕ್ತರು ಆಗಮಿಸಿದ್ದರು. ಈ ಕಾರಣದಿಂದ ದೇವಳದ ವಸತಿ ಗೃಹ ಹಾಗೂ ಖಾಸಗಿ ವಸತಿ ಗೃಹಗಳು ತುಂಬಿತ್ತು. ಆದುದರಿಂದ ಶ್ರೀ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿ ಮತ್ತು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ತಂಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಷಣ್ಮುಖ ಪ್ರಸಾದ ಭೋಜನ ಶಾಲೆಯಲ್ಲಿ ಅತ್ಯಧಿಕ ಭಕ್ತರು ಭೋಜನ ಸ್ವೀಕರಿಸಿದರು. ಅಧಿಕ ಭಕ್ತರು ಆಗಮಿಸಿದ ಕಾರಣ ಆದಿಸುಬ್ರಹ್ಮಣ್ಯದಲ್ಲಿ ಭಕ್ತರ ಅನುಕೂಲತೆಗಾಗಿ ಬಫೆ ಮಾದರಿಯಲ್ಲಿ ವಿಶೇಷ ಬೋಜನ ಪ್ರಸಾದ ವ್ಯವಸ್ಥೆಯನ್ನು ಶ್ರೀ ದೇವಳದಿಂದ ಮಾಡಲಾಗಿತ್ತು.
ಭಾನುವಾರ ಆಶ್ಲೇಷ ನಕ್ಷತ್ರ ಹಿನ್ನೆಲೆಯಲ್ಲಿ ಆಶ್ಲೇಷ ಪೂಜೆ ಸಲ್ಲಿಸಲು ರಾಜಗೋಪುರದಿಂದ ಕೆ.ಎಸ್ ಆರ್. ಟಿ ವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ