ಹೊಸದಿಗಂತ ವರದಿ,ವಿಜಯಪುರ:
ವಿಜಯೇಂದ್ರ ಮುಖ್ಯಮಂತ್ರಿ ಆಗಲಿ, ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರಗೆ ನಾಯಕನಾಗುವ ಎಲ್ಲ ಕ್ವಾಲಿಟಿ ಇವೆ. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿದ್ದವರು ಪ್ರಧಾನಿಯಾದರು. ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದರೆ ಏನ್ ತಪ್ಪಿದೆ. ಅದನ್ನ ನಿರ್ಧಾರ ಮಾಡಲು ರಾಜ್ಯ, ರಾಷ್ಟ್ರ ನಾಯಕರಿದ್ದಾರೆ ಎಂದರು.
ಎಲ್ಲ ಕ್ವಾಲಿಟಿಗಳು ವಿಜಯೇಂದ್ರಗೆ ಇದೆ ಅನ್ನೋದರಲ್ಲಿ ಯಾವುದೆ ಅನುಮಾನ ಇಲ್ಲ. ಏನೇ ಜವಾಬ್ದಾರಿ ನೀಡುವುದು ಹೈಕಮಾಂಡ್ ಗೆ ಬಿಟ್ಟದ್ದು, ಸಚಿವ ಸಂಪುಟ ವಿಸ್ತರಣೆಯು ಪಕ್ಷದ ನಾಯಕರಿಗೆ ಬಿಟ್ಟದ್ದು ಎಂದರು.
ಯಡಿಯೂರಪ್ಪ ಸೈಡ್‌ಲೈನ್ ಕುರಿತ ಕಾಂಗ್ರೆಸ್ ನಾಯಕರ ಹೇಳಿಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳಲಿ. ಯಡಿಯೂರಪ್ಪ ನಮ್ಮ ಪಕ್ಷದ ಮುಖಂಡರು, ಎರಡು ಮಾತೇ ಇಲ್ಲ. ಒಂದು ಕುಟುಂಬದಲ್ಲಿ ಮೂರು ಸೀಟ್ ಇದೆ. ದೇಶದಲ್ಲೆ ಯಾರಿಗೂ ಕೊಟ್ಟಿಲ್ಲ. ಇದು ಎಲ್ಲರಿಗು ಗೊತ್ತಿರೋದೆ. ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಲಿ, ಬೆಳೆಯಲಿ ಎನ್ನುವುದು ಇದೆ. ವಿಜಯೇಂದ್ರ 30 ವರ್ಷಗಳಿಂದ ಗೊತ್ತು, ಮುಂದೆ ಯಡಿಯೂರಪ್ಪ, ಸಂಘಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ಎತ್ತರಕ್ಕೆ ಬೆಳೆಯುತ್ತಾನೆ ಎಂದರು.