Sunday, November 9, 2025

ಜಪಾನ್‌ನಲ್ಲಿ ಭೂಕಂಪನ: ಇದು ಭಾರೀ ಸುನಾಮಿಯ ಮುನ್ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ ನ ಉತ್ತರ ಪೆಸಿಫಿಕ್ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಜಪಾನ್ ಭಾನುವಾರ ಇವಾಟೆ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಇವಾಟೆಯಲ್ಲಿ ಸಂಜೆ 5:03 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಒಂದು ಮೀಟರ್ (ಮೂರು ಅಡಿ) ಎತ್ತರದವರೆಗೆ ಸುನಾಮಿಯ ಸಾಧ್ಯತೆ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿರುವ ಪ್ರಕಾರ, ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ 39.51° N ಅಕ್ಷಾಂಶ ಮತ್ತು 143.38° E ರೇಖಾಂಶದಲ್ಲಿ 30 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಏತನ್ಮಧ್ಯೆ, ರಾಷ್ಟ್ರೀಯ ಪ್ರಸಾರಕರಾದ NHK,ಕಡಲಾಚೆಯ ಸುನಾಮಿ ಅಲೆಗಳು ಕಂಡುಬರುತ್ತಿವೆ ಮತ್ತು ಕರಾವಳಿ ಪ್ರದೇಶಗಳ ಬಳಿ ಹೋಗದಂತೆ ನಿವಾಸಿಗಳನ್ನು ಒತ್ತಾಯಿಸಿದೆ.

2011 ರಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಇಡೀ ಜಪಾನ್‌ ತತ್ತರಿಸಿ ಹೋಗಿತ್ತು. 18,500 ಜನರು ಮೃತಪಟ್ಟಿದ್ದರು. ಇದೇ ದುರಂತವು ಫುಕುಶಿಮಾ ಪರಮಾಣು ಸ್ಥಾವರದಲ್ಲಿನ ಮೂರು ರಿಯಾಕ್ಟರ್‌ಗಳು ಕರಗಲು ಕಾರಣವಾಯಿತು.

error: Content is protected !!