ಮಂಗಳೂರು ಕಮಿಷನರೇಟ್‌ಗೆ `ಚಾರ್ಲಿ’ ಎಂಟ್ರಿ!

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರಿನ ಚಿತ್ರ ಮಂದಿರಗಳಲ್ಲಿ ಶುಕ್ರವಾರ `777 ಚಾರ್ಲಿ’ ಸಿನೆಮಾ’ದ ಬಿಡುಗಡೆಯ ಗೌಜಿಯಾದರೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ `ಚಾರ್ಲಿ’ ನಾಮಕರಣದ ಸಂಭ್ರಮ!
ಹೌದು, ಮಂಗಳೂರು ಕಮಿಷನರೇಟ್‌ನ ಶ್ವಾನದಳ ವಿಭಾಗಕ್ಕೆ ಮೂರು ತಿಂಗಳ ಲ್ಯಾಬ್ರೊಡಾರ್ ರಿಟ್ರೀವರ್ ಜಾತಿಯ ಶ್ವಾನ ಮರಿಯ ಆಗಮನವಾಗಿದ್ದು, ಅದಕ್ಕೆ `ಚಾರ್ಲಿ’ ಎಂದು ಹೆಸರಿಡಲಾಗಿದೆ. ರಾಜ್ಯದೆಲ್ಲಡೆ ನಟ ರಕ್ಷಿತ್ ಶೆಟ್ಟಿ ಅಭಿನಯದ777 ಚಾರ್ಲಿ ಸಿನೆಮಾ ಬಿಡುಗಡೆಯಾಗುತ್ತಲೇ `ಚಾರ್ಲಿ’ ಹೆಸರಿಡುವ ಸಂಭ್ರಮದ ವಾತಾವರಣ ಕಮಿಷನರೇಟ್ ಕಚೇರಿ ಆವರಣದಲ್ಲಿ ಏರ್ಪಟ್ಟಿತ್ತು.
ಸಿಎಆರ್ ವಿಭಾಗದ ಎಸಿಪಿಗಳಾದ ಎಂ.ಉಪಾಸೆ, ಚೆನ್ನವೀರಪ್ಪ ಹಡಪದ್ ಉಪಸ್ಥಿತರಿದ್ದು, ಪುಟಾಣಿ ಚಾರ್ಲಿಗೆ ಹೂಹಾರ ಹಾಕಿ ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ನಾಮಕರಣ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!