ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜವಾದಿ ಪಕ್ಷದಿಂದ ಮೂರು ಬಾರಿ ಶಾಸಕರಾಗಿದ್ದ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ನಿಕಟ ಸಂಬಂಧಿಯಾದ ರಾಮೇಶ್ವರ್ ಸಿಂಗ್ ಅವರನ್ನು ದರೋಡೆಕೋರ ಕಾಯ್ದೆಯಡಿ ಬಂಧಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅವರ ವಿರುದ್ಧ ಇಟಾಹ್, ಅಲಿಗಂಜ್ ಮತ್ತು ಜೈತ್ರಾ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 77 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ವರದಿ ಮಾಡಿವೆ. ಎಸ್‌ಪಿ ಮಾಜಿ ಶಾಸಕ ರಾಮೇಶ್ವರ್ ಸಿಂಗ್ ಯಾದವ್ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜುಗೇಂದ್ರ ಸಿಂಗ್ ಯಾದವ್ ಮತ್ತು ಅವರ ಪತ್ನಿ ರೇಖಾ ಯಾದವ್ ವಿರುದ್ಧ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಪ್ರಕರಣ, ಭೂಮಾಫಿಯಾ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಅವರ ಸಹೋದರರಾದ ಜುಗೇಂದ್ರ ಸಿಂಗ್ ಯಾದವ್‌ಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ. ಮೂಲಗಳ ವರದಿಯ ಪ್ರಕಾರ ರಾಮೇಶ್ವರ್ ಸಿಂಗ್ ಆಗ್ರಾದಿಂದ ದೆಹಲಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದರು ಆದರೆ ಅವರು ಜಿಲ್ಲೆಯನ್ನು ತೊರೆಯುವ ಮೊದಲೇ ಬಂಧನಕ್ಕೊಳಗಾಗಿದ್ದಾರೆ.