Monday, November 10, 2025

ದಿನಭವಿಷ್ಯ: ಹೊರಗಡೆ ಸಮಸ್ಯೆ ಏನೇ ಇರಲಿ, ಕುಟುಂಬದಲ್ಲಿ ನೆಮ್ಮದಿಯಿದೆ

ಮೇಷ
ಕೌಟುಂಬಿಕ ಪರಿಸರ ತೃಪ್ತಿದಾಯಕ. ಆರೋಗ್ಯದತ್ತ ಹೆಚ್ಚು ಗಮನ ಕೊಡಿ. ವೃತ್ತಿ ಕಾರ್ಯ ಸುಲಲಿತ ಹಾಗೂ ನಿರ್ವಿಘ್ನ.
ವೃಷಭ
ಒತ್ತಡರಹಿತ ದಿನ. ಆಪ್ತರೊಂದಿಗೆ ಕಾಲಕ್ಷೇಪ. ಹದಗೆಟ್ಟ ಸಂಬಂಧವೊಂದು ಚಿಗಿತುಕೊಳ್ಳುವ ಸಂಭವವಿದೆ.
ಮಿಥುನ
ಆಪ್ತರ ಜತೆ ಭಾವನಾತ್ಮಕ ಸಂಘರ್ಷ. ಮಾತಿನ ಚಕಮಕಿಗೆ ಆಸ್ಪದ ನೀಡದಿರಿ. ಕೆಲ ಸಂದರ್ಭದಲ್ಲಿ ರಾಜಿ ನೀತಿಯೇ ಉತ್ತಮ.
ಕಟಕ
ಮಹತ್ವದ ವಿಷಯದ ಬಗ್ಗೆ ಆಲೋಚಿಸಿ ನಿರ್ಧಾರ ತಾಳಿ. ದುಡುಕಿನ ಕ್ರಮ ಅನಾಹುತ ಉಂಟು ಮಾಡೀತು. ಕುಟುಂಬಸ್ಥರ ಸಲಹೆ ಪಡೆಯಿರಿ.  
ಸಿಂಹ
ಖಾಸಗಿ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಹೊಂದಾಣಿಕೆ ಅವಶ್ಯ. ಒಂದಕ್ಕೆ ಮಹತ್ವ ಕೊಟ್ಟು ಮತ್ತೊಂದನ್ನು ಕಡೆಗಣಿಸಬೇಡಿ.
ಕನ್ಯಾ
ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಗ್ರಹಗಳು ಪೂರಕವಾಗಿವೆ. ಯಾವುದೇ ನಿರ್ಧಾರ ನಿಮಗೆ ಪೂರಕವಾಗಿ ಪರಿಣಮಿಸುವುದು.  
ತುಲಾ
ನಿಮ್ಮ ಕೆಲಸವನ್ನು ಪಟ್ಟು ಹಿಡಿದು ಮಾಡ ಬೇಕಾಗುವುದು. ಇಲ್ಲ ವಾದರೆ ಪೂರ್ಣಗೊಳ್ಳದು. ಆರೋಗ್ಯದ ಬಗ್ಗೆ ಗಮನ ಕೊಡಿ. ಧನವೃದ್ಧಿ.
ವೃಶ್ಚಿಕ
ಸಂತೋಷದ ದಿನ. ನಿಮ್ಮ ಮೆಚ್ಚಿನ ವ್ಯಕ್ತಿಗಳ ಜತೆ ಮತ್ತು ಇಷ್ಟದ ಹವ್ಯಾಸದಲ್ಲಿ ಮಗ್ನ. ಯಾವುದೇ ಸಮಸ್ಯೆ ಇಂದು ಬಾಽಸದು.
ಧನು
ಕೆಲವರ ಕುರಿತಾದ ನಿಮ್ಮ ಅಭಿಪ್ರಾಯ ಬದಲಾಗುವ ಪ್ರಸಂಗ ಒದಗಬಹುದು. ಅವರ ಅವಶ್ಯಕತೆ ಅರಿವಾದೀತು. ಬಿಕ್ಕಟ್ಟು ಶಮನ.  
ಮಕರ
ಆರ್ಥಿಕ ಪರಿಸ್ಥಿತಿ ಸುಧಾರಣೆ. ಸಮಸ್ಯೆ ನಿವಾರಣೆ. ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ಪರಿಹರಿಸಲು ಶಕ್ತರಾಗುವಿರಿ.  
ಕುಂಭ
ಯೋಜಿಸಿ ನಡೆದರೆ ಮಾತ್ರ ಉತ್ತಮ ಫಲ. ಇತರರ ಸಹಕಾರವೂ ಅಗತ್ಯವಾಗಿದೆ. ಆಪ್ತರ ಜತೆಗಿನ ಅಸಮಾಧಾನ ನಿವಾರಣೆ.
 ಮೀನ
ಸಣ್ಣ ವಿಷಯಗಳನ್ನು ಕಡೆಗಣಿಸಬೇಡಿ.  ಅದುವೇ ದೊಡ್ಡ ಸಮಸ್ಯೆ ಸೃಷ್ಟಿಸಬಹುದು. ಆತ್ಮೀಯರ ಜತೆ ಮುನಿಸು ಉಂಟಾದೀತು.  

error: Content is protected !!