ಚಾರ್ಲಿಯನ್ನು ನೋಡಲು ಡಯಾನಗೆ ಸಿಗಲಿಲ್ಲ ಅನುಮತಿ: ಬೇಸರಗೊಂಡ ಮಾಲೀಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯದಲ್ಲಿ ‘777 ಚಾರ್ಲಿ’ ಸಿನಿಮಾ ಎಲ್ಲರ ಮನ ಗೆದ್ದಿದೆ . ಅದರಲ್ಲಿ ಶ್ವಾನ ದ ಅಭಿನಯ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದ್ದು, ಚಾರ್ಲಿಯ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸಿನಿಮಾ ನೋಡಿದ ಬಳಿಕ ಅದೆಷ್ಟು ಜನರಿಗೆ ಶ್ವಾನದ ಮೇಲಿನ ಭಾವನೆ ಬದಲಾಗಿದ್ದರೆ , ಇನ್ನು ಹಲವಾರು ತಾವು ಸಾಕುತ್ತಿರುವ ಮುದ್ದಿನ ಶ್ವಾನದ ಜೊತೆ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಣೆ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.
ಇದೇ ರೀತಿ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ತನ್ನ ಮುದ್ದಿನ ನಾಯಿ “ಡಯಾನ” ಜೊತೆ ಆಗಮಿಸಿದ್ದ ಮಾಲೀಕನಿಗೆ ಸಿನಿಮಾ ವೀಕ್ಷಣೆ ಅನುಮತಿ ಸಿಕ್ಕಿಲ್ಲ. ಇದು ಅವರಿಗೆ ನಿರಾಶೆ ಮತ್ತು ಬೇಸರ ತರಿಸಿದೆ.
ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಕೆಂಚ ಎಂಬುವವರು ಆನ್ ಲೈನ್ ನಲ್ಲಿ ಚಾರ್ಲಿ ಚಿತ್ರ ವೀಕ್ಷಿಸಲು ಮೂರು ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಅದರಂತೆ ಬೆಳಗಿನ ಶೋ ವೀಕ್ಷಿಸಲು ಬಂದಿದ್ದರು. ಹಸನ್ ಎಂಬುವವರೂ ಸಹ ತಾವು ಸಾಕುತ್ತಿರುವ ಶ್ವಾನದ ಜೊತೆ ಬಂದಾಗ ಪ್ರವೇಶ ನಿರಾಕರಿಸಲಾಗಿದೆ.
ಶ್ವಾನದೊಂದಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡದ ಕಾರಣ ಆಕ್ರೋಶಗೊಂಡ ಕೆಂಚ ಹಾಗೂ ಹಸನ್ ಅವರು ಚಿತ್ರಮಂದಿರದ ಮುಂದೆ ತಮ್ಮ ಶ್ವಾನಗಳ ಜೊತೆ ಪ್ರತಿಭಟನೆ ನಡೆಸಿದರು.
ಫೇಸ್ ಬುಕ್ ನಲ್ಲಿ ಚಿತ್ರದ ಎರಡು ಸೀನ್‌ ನೋಡಿದಾಗ ತುಂಬಾ ಖುಷಿಯಾಯಿತು. ಚಾರ್ಲಿ ಸಿನಿಮಾ ತುಂಬಾ ಇಷ್ಟ ಆಗಿದೆ. ಆದ್ರೆ ಮುದ್ದಿನ ನಾಯಿ ಜೊತೆ ಹೋಗಿ ಸಿನಿಮಾ ವೀಕ್ಷಿಸಲಾಗಲಿಲ್ಲ ಎಂದು ಬೇಸರವಾಗಿದೆ. ಡಯಾನಾ ಜೊತೆ ನೋಡಬೇಕೆಂಬ ಆಸೆ ಇತ್ತು. ಶ್ವಾನಕ್ಕೂ ಮನರಂಜನೆ ಸಿಗುತಿತ್ತು. ಆದ್ರೆ ಇದಕ್ಕೆ ಅವಕಾಶ ಕೊಡದಿರುವುದು ಆಘಾತ ತಂದಿದೆ ಎಂದು ಕೆಂಚ ಎನ್ನುವವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!