ಐಡಬ್ಲ್ಯುಎಫ್ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದ ಗುರುನಾಯ್ಡು ಭಾರತದ ಮೊದಲ ವೈಟ್​ಲಿಫ್ಟರ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೆಕ್ಸಿಕೋದ ಲಿಯಾನ್‌ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಗುರುನಾಯ್ಡು ಸನಪತಿ ಚಿನ್ನ ಗೆದ್ದ ಭಾರತದ ಮೊದಲ ವೈಟ್​ಲಿಫ್ಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ತಡರಾತ್ರಿ ನಡೆದ 55 ಕೆಜಿ ಯುವಕರ ವಿಭಾಗದ ಸ್ಪರ್ಧೆಯಲ್ಲಿ 16 ವರ್ಷದ ವೈಟ್​ಲಿಫ್ಟರ್​ ಒಟ್ಟು 230 ಕೆಜಿ ಭಾರ (104 ಕೆಜಿ+126 ಕೆಜಿ) ಎತ್ತುವ ಮೂಲಕ ವಿಶೇಷ ಸಾಧನೆ ತೋರಿದರು.
45 ಕೆಜಿ ಯುವತಿಯರ ವಿಭಾಗದಲ್ಲಿ ಸೌಮ್ಯ ಎಸ್.ದಳವಿ ಎರಡನೇ ದಿನದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಎರಡು ಬಾರಿ ಖೇಲೋ ಇಂಡಿಯಾ ಯೂತ್ ಚಿನ್ನದ ಪದಕ ಗೆದ್ದಿರುವ ಮಹಾರಾಷ್ಟ್ರದ ದಳವಿ, 148 ಕೆಜಿ (65 ಕೆಜಿ + 83 ಕೆಜಿ) ತೂಕ ಎತ್ತಿ ಫಿಲಿಪೈನ್ಸ್‌ನ ರೋಸ್ ಜೆ ರಾಮೋಸ್ 155 ಕೆಜಿ (70 ಕೆಜಿ + 85 ಕೆಜಿ) ಮತ್ತು ವೆನೆಜುವೆಲಾ ಕೆರ್ಲಿಸ್ ಎಂ. ಮೊಂತಿಲಾ 153 ಕೆ.ಜಿ. (71 ಕೆಜಿ + 82 ಕೆಜಿ) ನಂತರ ಮೂರನೇ ಸ್ಥಾನ ಪಡೆದರು.
ಸ್ಪರ್ಧೆಯ ಆರಂಭಿಕ ದಿನದಂದು ಆಕಾಂಕ್ಷಾ ಕಿಶೋರ ವ್ಯಾವಹರೆ ಮತ್ತು ವಿಜಯ್ ಪ್ರಜಾಪತಿ ಬೆಳ್ಳಿ ಪದಕ ಸಾಧನೆ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here