ತಪ್ಪು ಮಾಡಿದವರಿಗೆ ನೋಟಿಸ್​​​, ಇದು ಇಟಲಿ ಅಲ್ಲ ಭಾರತ, ಇಲ್ಲಿ ರಾಜಕೀಯ ಮಾಡಬೇಡಿ: ಸಚಿವ ಆರ್.ಅಶೋಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ ಪ್ರಕ್ರಿಯೆ. ಇದು ಇಟಲಿ ಅಲ್ಲ ಭಾರತ, ಇಲ್ಲಿ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ರಾಹುಲ್​​ ಗಾಂಧಿ ಮತ್ತು ಸೋನಿಯಾ ಗಾಂಧಿ ( ಅವರಿಗೆ ಇಡಿ ಸಮನ್ಸ ನೀಡಿದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ಸ್ವಾತಂತ್ರ್ಯಕ್ಕೂ ಮುನ್ನ ನ್ಯಾಷನಲ್ ​​​​ಹೆರಾಲ್ಡ್ ಪತ್ರಿಕೆ ಆರಂಭವಾಗಿದೆ. ಸ್ವಾತಂತ್ರ್ಯ ಯೋಧರು ಹಣ ಹಾಕಿ ಪ್ರಾರಂಭವಾದ ಪತ್ರಿಕೆಗೆ ಅಂದಿನ ಸರ್ಕಾರಗಳು ಭೂಮಿ ನೀಡಿದ್ದವು. ಪತ್ರಿಕೆಯ ಭೂ ಕಬಳಿಕೆಗೆ ಸೋನಿಯಾ, ರಾಹುಲ್​ ಮುಂದಾಗಿದ್ದಾರೆ. ಇದು ಕಾಂಗ್ರೆಸ್​​​​ನವರಿಗೆ ಸಂಬಂಧಿಸಿದ ಪ್ರಕರಣ ಅಲ್ಲ. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ​​ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಡಿ, ಸಿಬಿಐ ಇದ್ದವು. ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ ಪ್ರಕ್ರಿಯೆ. ಇಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅವರಿಗೆ ಎಮರ್ಜೆನ್ಸಿ ತಪ್ಪು ಎನ್ನೋದು ಈಗಲಾದರೂ ಅರ್ಥ ಅಯ್ತಾ? ನಾಯಕರ ಬಂಧನ ಆಗಿಲ್ಲ ಆಗಲೇ ಇದನ್ನು ಭೀತಿಯಿಂದ ರಾಜಕೀಯಗೊಳಿಸುತ್ತಿದ್ದಾರೆ. ಕಾಂಗ್ರೆಸ್ ತಪ್ಪಿತಸ್ಥರಲ್ಲ ಅಂದರೆ ಯಾಕೆ ಭೀತಿ? ಕಾಂಗ್ರೆಸ್ ಪಾರ್ಟಿ ಮೇಲೆ ಹಾಕಿರುವ ಕೇಸ್ ಅಲ್ಲ ಇದು, ಸರ್ಕಾರ ಹಾಕಿರುವ ಕೇಸ್ ಕೂಡ ಅಲ್ಲ. ವ್ಯಕ್ತಿಯೊಬ್ಬರು ಹಾಕಿದ ಕೇಸ್, ದೂರು ಬಂದಿದೆ ತನಿಖೆ ಮಾಡುತ್ತಿದ್ದಾರೆ. ನಾಳೆ ಯಾವುದೋ ಜನ ಸಾಮಾನ್ಯರ ಮೇಲೂ ಇಡಿ ಕೇಸ್ ಇದೆ. ಹಾಗಂತ ಇ.ಡಿ ಕೇಸ್ ಇರುವವರೆಲ್ಲ ಕೂಡ ಇಡಿ ಮುಂದೆ ಪ್ರೊಟೆಸ್ಟ್ ಮಾಡ್ತಿದ್ದಾರಾ? ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!